ಅಯೋಗ್ಯ. ನೀನಾಸಂ ಸತೀಶ್, ರಚಿತಾ ರಾಮ್ ಕಾಂಬಿನೇಷನ್ನಿನ ಸಿನಿಮಾ ಶೂಟಿಂಗ್ ಮುಗಿಸಿ ಬಿಡುಗಡೆಗೆ ರೆಡಿಯಾಗಿದೆ. ಹೀಗಿರುವಾಗಲೇ ಚಿತ್ರತಂಡಕ್ಕೆ ಒಂದು ಶುಭ ಸುದ್ದಿ. ಚಿತ್ರದ ಹಾಡುಗಳು ಆನ್‍ಲೈನ್‍ನಲ್ಲಿ ಸೂಪರ್ ಹಿಟ್ ಆಗಿವೆ. 1 ಮಿಲಿಯನ್‍ಗೂ ಹೆಚ್ಚು ಜನ ಚಿತ್ರದ ಹಾಡುಗಳನ್ನ ಇಷ್ಟಪಟ್ಟಿದ್ದಾರೆ.
ಅಯೋಗ್ಯ ಚಿತ್ರದ ಏನಮ್ಮಿ ಏನಮ್ಮಿ ಎಂಬ ವಿಜಯ್ ಪ್ರಕಾಶ್ ಹಾಡಿರುವ ಟಪ್ಪಾಂಗುಚ್ಚಿ ಹಾಡು ಭರ್ಜರಿ ಸೌಂಡು ಮಾಡ್ತಿದೆ. ನನ್ನ ಸಿನಿಮಾದ ಹಾಡೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ನನಗೆ ಹೊಸ ಅನುಭವ. ಇಂಥದ್ದೇ ಯಶಸ್ಸು ಚಿತ್ರಕ್ಕೂ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಸತೀಶ್.
ಅಷ್ಟೇ ಅಲ್ಲ, ಟಗರು ಚಿತ್ರದ ಟೈಟಲ್ ಸಾಂಗ್ ಹಾಡಿದ್ದ ಆಂಥೋನಿ, ಅಯೋಗ್ಯ ಚಿತ್ರದ ಟೈಟಲ್ ಸಾಂಗ್‍ಗೂ ಧ್ವನಿಯಾಗಿದ್ದಾರೆ. ಆ ಹಾಡು ಕೂಡಾ ಸೂಪರ್ ಹಿಟ್.
ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮತ್ತು ನಿರ್ದೇಶಕ ಚೇತನ್ ಮಹೇಶ್ ಪ್ರೇಕ್ಷಕರ ಸ್ವಾಗತಕ್ಕೆ ಖುಷಿಯಾಗಿದ್ದಾರೆ.