ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರಂತೆ ಅನ್ನೋ ಸುದ್ದಿ ಈಗ ಗಾಂಧಿನಗರದ ಹಾಟ್‍ನ್ಯೂಸ್. ಕಿಚ್ಚ ಸುದೀಪ್‍ಗೆ ಬಾಲಿವುಡ್ ಹೊಸದಲ್ಲ. ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿರುವ ಸುದೀಪ್, ಅಮಿತಾಬ್ ಬಚ್ಚನ್‍ರಂತಹ ದಿಗ್ಗಜನಿಂದಲೇ ಮೆಚ್ಚುಗೆ ಗಳಿಸಿರುವ ಕಲಾವಿದ. ದಬಾಂಗ್ 3 ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವುದನ್ನು ಸುದೀಪ್ ಅಧಿಕೃತವಾಗಿ ಹೇಳಿಲ್ಲವಾದರೂ ಸುದ್ದಿಯನ್ನು ನಿರಾಕರಿಸಿಲ್ಲ.
ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ನಟಿಸುತ್ತಿಲ್ಲವಂತೆ. ಬದಲಿಗೆ ಅತ್ಯಂತ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ಧಾರೆ ಎನ್ನುವುದು ಒಂದು ಸುದ್ದಿಯಾದರೆ, ಇಲ್ಲ.. ಇಲ್ಲ.. ಸುದೀಪ್ ವಿಲನ್ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ಧಾರೆ ಎನ್ನುತ್ತಿದೆ ಇನ್ನೊಂದು ಮೂಲ. ಸಲ್ಮಾನ್ ಸೋದರ ಅರ್ಬಾಜ್ ಖಾನ್, ಸುದೀಪ್‍ರ ಆತ್ಮೀಯ ಗೆಳೆಯ. ಈ ಗೆಳೆತನವೇ ಸುದೀಪ್ ಅವರನ್ನು ದಬಾಂಗ್ 3ಗೆ ಕರೆದೊಯ್ಯುತ್ತಿದೆ.
ಈ ಮೊದಲೇ ಸುದೀಪ್ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಲ್ಮಾನ್ ಎದುರು ನಟಿಸಬೇಕಿತ್ತು. ಡೇಟ್ಸ್ ಸಮಸ್ಯೆಯಿಂದಾಗಿ ಆ ಚಿತ್ರವನ್ನು ಸುದೀಪ್ ಕೈಬಿಟ್ಟಿದ್ದರು. ಈಗ ಮತ್ತೊಮ್ಮೆ ಚಾನ್ಸ್.