ಪೂಜಾ ಗಾಂಧಿ. ಕನ್ನಡಿಗರಿಗೆ ಮಳೆ ಹುಡುಗಿ. ನಟಿ, ನಿರ್ಮಾಪಕಿ. ಅವರ ತಂಗಿ ರಾಧಿಕಾ ಕೂಡಾ ಚಿತ್ರನಟಿ. ಆದರೆ, ಇವರಿಬ್ಬರನ್ನೂ ಮೀರಿಸಿರುವುದು ಇನ್ನೊಬ್ಬ ತಂಗಿ ಸುಹಾನಿ ಗಾಂಧಿ. ಅವರು ಇಡೀ ದೇಶಕ್ಕೇ ಹೆಮ್ಮೆ ತಂದಿದ್ದಾರೆ. ಪೂಜಾ ಗಾಂಧಿಯವರ ತಂಗಿ ಸುಹಾನಿ, ರಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ವೇಟ್ಲಿಫ್ಟಿಂಗ್ನಲ್ಲಿ ಸ್ಟ್ರಾಂಗೆಸ್ಟ್ ವುಮೆನ್ ಇನ್ ಇಂಡಿಯಾ ಅಭಿದಾನ ಪಡೆದಿದ್ದಾರೆ. 3 ಚಿನ್ನದ ಪದಕ ಗೆದ್ದಿದ್ದಾರೆ.
ನನ್ನ ತಂಗಿ ನನ್ನ ಹೆಮ್ಮೆ. ನಾವು ಸಿನಿಮಾ ಎನ್ನುತ್ತಿದ್ದರೆ, ಅವಳು ಆಟ, ಪವರ್ಲಿಫ್ಟಿಂಗ್ ಎನ್ನುತ್ತಿದ್ದಳು. ಅವಳ ಸಾಧನೆ ಖುಷಿ ಕೊಟ್ಟಿದೆ ಎಂದಿದ್ದಾರೆ ಪೂಜಾ ಗಾಂಧಿ.