` ಶ್ರೀಮುರಳಿಗೆ ವಿಲನ್‍ಗಳೆಷ್ಟು ಜನ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
so many villains for srimurli's bharathe
Srimurali

ರೋರಿಂಗ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಕ್ಕೆ ಎಷ್ಟು ಜನ ವಿಲನ್‍ಗಳಿರಬಹುದು..? ಒಂದು ಮೂಲದ ಪ್ರಕಾರ ಒಟ್ಟು ವಿಲನ್‍ಗಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 9 ವಿಲನ್‍ಗಳಿರುವ ಫ್ಯಾಮಿಲಿ ಎಂಟರ್‍ಟೈನರ್ ಚಿತ್ರದ ಕಥೆಯೇನು..? ಈಗಲೇ ಹೇಳಿಬಿಡ್ತೀವಾ.. ಸಿನಿಮಾ ರಿಲೀಸ್ ಆದಾಗ ಗೊತ್ತಾಗುತ್ತೆ ಬಿಡಿ ಅಂತಾರೆ ನಿರ್ದೇಶಕ ಚೇತನ್ ಕುಮಾರ್.

ಈಗಾಗಲೇ ಆ ಪಾತ್ರಗಳಿಗಾಗಿ ಜಗಪತಿ ಬಾಬು, ಸಂಪತ್ ಕುಮಾರ್, ಸುಮನ್ ಮೊದಲಾದ ಟಾಲಿವುಡ್, ಬಾಲಿವುಡ್ ಕಲಾವಿದರನ್ನು ಸಂಪರ್ಕಿಸಲಾಗಿದೆಯಂತೆ.

ರಾಜಸ್ಥಾನದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಚಿತ್ರದ ಫಸ್ಟ್‍ಲುಕ್ ಕೆಲವೇ ದಿನಗಳಲ್ಲಿ ಹೊರಬೀಳಲಿದೆ. ಶ್ರೀಲೀಲಾ ನಾಯಕಿಯಾಗಿರುವ ಚಿತ್ರದ ಫಸ್ಟ್‍ಲುಕ್‍ನ್ನು ರ್ಯಾಪ್ ಸಾಂಗ್ ಮೂಲಕ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆಯಂತೆ.

Londonalli Lambodara Movie Gallery

Rightbanner02_butterfly_inside

Panchatantra Movie Gallery