ರಕ್ಷಿತ್ ಶೆಟ್ಟಿ ಅಭಿನಯದ 777ಚಾರ್ಲಿ ಚಿತ್ರಕ್ಕೆ ನಾಯಕಿಯಾಗಿ ಕಿರುತೆರೆ ಧಾರಾವಾಹಿ ಹರಹರ ಮಹಾದೇವ ಖ್ಯಾತಿಯ ಸಂಗೀತಾ ಆಯ್ಕೆಯಾಗಿದ್ದಾರೆ. ಮಹಾದೇವ ಧಾರಾವಾಹಿಯಲ್ಲಿ ಸತಿ ಪಾತ್ರದಿಂದ ಗಮನ ಸೆಳೆದಿದ್ದ ಸಂಗೀತಾಗೆ ಬೆಳ್ಳಿತೆರೆಯಲ್ಲಿ ಇದು ಮೊದಲ ಅನುಭವ. ಎರಡೂವರೆ ಸಾವಿರಕ್ಕೂ ಹೆಚ್ಚು ಪ್ರೊಫೈಲ್‍ಗಳಲ್ಲಿ 150 ಮಂದಿಯನ್ನು ಅಡಿಷನ್ ಮಾಡಿ ಆಯ್ಕೆಯಾಗಿರುವ ಪ್ರತಿಭೆ ಸಂಗೀತಾ.
ಮೊದಲ ಹಂತದ ಚಿತ್ರೀಕರಣವನ್ನು ಈಗಾಗಲೇ ಮುಗಿಸಿರುವ 777 ಚಾರ್ಲಿ ಚಿತ್ರ, 2ನೇ ಹಂತದ ಚಿತ್ರೀಕರಣದಲ್ಲಿ ನಾಯಕಿಯ ಭಾಗದ ಶೂಟಿಂಗ್ ಪ್ಲಾನ್ ಮಾಡಿದೆ. ಮೊದಲ ಸಿನಿಮಾದಲ್ಲೇ ರಕ್ಷಿತ್ ಶೆಟ್ಟಿ ಜೊತೆ ನಟಿಸುವ ಅವಕಾಶ ಸಿಕ್ಕಿರೋದು ಅದೃಷ್ಟವೇ ಹೌದು ಅಂತಾರೆ ಸಂಗೀತಾ.
ಹೊಸ ಪ್ರತಿಭೆ ಜೊತೆಗೆ ಆಕೆಗೆ ನಟನೆಯ ಕೆಲವು ಸೂಕ್ಷ್ಮಗಳು ಗೊತ್ತಿವೆ. ಆಕೆಯ ಆಯ್ಕೆಗೆ ಅದೇ ಕಾರಣ ಅಂತಾರೆ ನಿರ್ದೇಶಕ ಪುಷ್ಕರ್ ಮಲ್ಲಿಕಾರ್ಜುನಯ್ಯ.
ಕಥಾ ನಾಯಕ ಮತ್ತು ನಾಯಿಯ ನಡುವಿನ ಕಥೆ ಚಿತ್ರದಲ್ಲಿದೆ. ನಾಯಕಿಯ ಪಾತ್ರ ಮಾಮೂಲಿ ಸಿನಿಮಾಗಳ ನಾಯಕಿಯ ಪಾತ್ರದ ಹಾಗಿಲ್ಲ. ಹೀಗಾಗಿ ಹೊಸ ಹುಡುಗಿಯ ಹುಡುಕಾಟದಲ್ಲಿದ್ದ ನಮಗೆ ಉತ್ತಮ ಪ್ರತಿಭೆ ಸಿಕ್ಕಿದ್ದಾರೆ ಎಂದು ಖುಷಿಯಾಗಿದ್ದಾರೆ ನಿದೇಶಕ ಕಿರಣ್ ರಾಜ್.