ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು.. ನಾಕೊಂದ್ಲ ನಾಕು, ನಾಕೆರಡ್ಲ ಎಂಟು.. ಸೇರಿದಂತೆ ಹಲವು ಮಧುರ ಗೀತೆಗಳಿಗೆ ಭಾವ ತುಂಬಿದ್ದ ಕವಿ, ಕಥೆಗಾರ, ಕಾದಂಬರಿಕಾರ, ಸಾಹಿತಿ, ಗೀತೆ ರಚನೆಕಾರ ಎಂ. ಎನ್. ವ್ಯಾಸರಾವ್ (73) ನಿಧನರಾಗಿದ್ದಾರೆ. ಭಾನುವಾರ ಬೆಳಗ್ಗೆ 10.30 ಸುಮಾರಿಗೆ ಹೃದಯಾಘಾತದಿಂದ ಮೃಪಟ್ಟಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿದ್ದ ವ್ಯಾಸರಾಔ್, ದಿಗ್ಗಜ ಪುಟ್ಟಣ್ಣ ಕಣಗಾಲ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ್ದರು. ಜನಮಾನಸದಲ್ಲಿ ಸದಾ ಹಸಿರಾಗಿರುವ ಭಾವಗೀತೆಗಳು ವ್ಯಾಸರಾವ್ ಅವರ ಹೆಗ್ಗುರುತು. 15 ಕ್ಕೂ ಹೆಚ್ಚು ಕ್ಯಾಸೆಟ್‌ಗಳಿಗೆ ಹಾಡುಗಳನ್ನು ಹಾಗೂ 35ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಸಾಹಿತ್ಯ ಒದಗಿಸಿರುವ ಹೆಗ್ಗಳಿಕೆ ಇವರದು.
ಮೈಸೂರು ಮಲ್ಲಿಗೆ, ಆಸ್ಫೋಟ, ದಂಗೆಯೆದ್ದ ಮಕ್ಕಳು, ವಾತ್ಸಲ್ಯ ಪಥ.. ಚಿತ್ರಗಳಿಗೆ ಕಥೆಗಾರರೂ ಆಗಿದ್ದ ವ್ಯಾಸರಾವ್, ರಾಜ್ಯಪ್ರಶಸ್ತಿ ಪುರಸ್ಕೃತರು. ಬೆಳ್ಳಿ ಮೂಡುವ ಮುನ್ನ, ಮಳೆಯಲ್ಲಿ ನೆನೆದ ಮರಗಳು (ಕವನ ಸಂಕಲನ), ಉತ್ತರಮುಖಿ (3 ನೀಳ್ಗತೆಗಳ ಸಂಕಲನ), ಸ್ಕಾಟ್ ಡಬಲ್ ಎಕ್ಸ್, ಅಖಿಲಾ ಮೈ ಡಾರ್ಲಿಂಗ್ (ಪತ್ತೇದಾರಿ ಕಾದಂಬರಿಗಳು) ನಿರೋಷ, ನದಿಮೂಲ (ಕಾದಂಬರಿ) ಕತ್ತಲಲ್ಲಿ ಬಂದವರು (ನಾಟಕ).. ಹಿಗೆ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸಾಧನೆ ಮಾಡಿದವರು. ಚೀನೀ, ಇಂಗ್ಲಿಷ್, ಫ್ರೆಂಚ್, ಉರ್ದು, ಸಿಂಧಿ ಕೇಗಳನ್ನು ಕನ್ನಡಕ್ಕೆ ಅನುವಾದಿಸಿದ್ದ ವ್ಯಾಸರಾವ್, ಸಾಹಿತ್ಯ ಕೃಷಿಯಲ್ಲಿ ಉನ್ನತ ಸಾಧನೆ ಮಾಡಿದವರು.
ವ್ಯಾಸರಾವ್ ನಿಧನಕ್ಕೆ ಫಿಲಂಚೇಂಬರ್ ಅಧ್ಯಕ್ಷ ಚಿನ್ನೇಗೌಡ, ಸಿಎಂ ಕುಮಾರಸ್ವಾಮಿ, ಸಚಿವೆ ಜಯಮಾಲಾ.. ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿಸದ್ದಾರೆ.