ಕಥೆಯೊಂದು ಶುರುವಾಗಿದೆ. ಪರಂವಾ ಸ್ಟುಡಿಯೋಸ್‍ನ ಹೊಸ ಸಿನಿಮಾ. ಆಗಸ್ಟ್ 3ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ದಿಗಂತ್ ಹೀರೋ. ಪೂಜಾ ದೇವರಿಯಾ ಹೀರೋಯಿನ್. ಜೀವನದ ವಿವಿಧ ಹಂತಗಳ ಲವ್‍ಸ್ಟೋರಿಯನ್ನು ಹೇಳುತ್ತಿರುವ ಈ ಸಿನಿಮಾ ಪ್ರೇಕ್ಷಕರಿಗೆ ಒಂದು ಇಂಟರೆಸ್ಟಿಂಗ್ ಸ್ಪರ್ಧೆಯನ್ನಿಟ್ಟಿದೆ. ಆ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಬಹುದು. ಗೆದ್ದರೆ, ಕಥೆಯೊಂದು ಶುರುವಾಗಿದೆ ಸಿನಿಮಾ ಥಿಯೇಟರ್‍ಗಳಲ್ಲಿ ರಿಲೀಸ್ ಆಗುವ ಒಂದು ದಿನ ಮೊದಲೇ (ಆಗಸ್ಟ್ 2) ಸಿನಿಮಾ ನೋಡಬಹುದು. ಫ್ರೀಯಾಗಿ. ಹಾಗಾದರೆ, ನೀವೇನ್ ಮಾಡ್ಬೇಕು ಗೊತ್ತೇ...
ನಿಮ್ಮದೇ ಲವ್ ಸ್ಟೋರಿಯನ್ನ ಪುಟ್ಟದಾಗಿ ಹೇಳಿ, ವಿಡಿಯೋ ರೆಕಾರ್ಡ್ ಮಾಡಿ. ಆ ವಿಡಿಯೋವನ್ನು ನಿಮ್ಮದೇ ಪೇಜ್‍ನಲ್ಲಿ ಅಪ್‍ಲೋಡ್ ಮಾಡಿ, ಕಥೆಯೊಂದು ಶುರುವಾಗಿದೆ ಪೇಜ್‍ಗೆ ಲಿಂಕ್ ಮಾಡಿ. ಕಥೆಯೊಂದು ಶುರುವಾಗಿದೆ ಹ್ಯಾಶ್‍ಟ್ಯಾಗ್ ಬಳಸಿ ಪೋಸ್ಟ್ ಮಾಡಿ. ನಂತರ ನಿಮ್ಮ ಲಕ್ ಚೆನ್ನಾಗಿದ್ದರೆ, ನಿಮಗೆ ಆಗಸ್ಟ್ 2ನೇ ತಾರೀಕು, ಬೆಂಗಳೂರಿನ ಮಲ್ಟಿಪ್ಲೆಕ್ಸ್‍ವೊಂದರಲ್ಲಿ ಸಿನಿಮಾ ನೋಡೋಕೆ ಬನ್ನಿ ಅನ್ನೋ ಮೆಸೇಜ್ ಕೊಡುತ್ತೆ ಸಿನಿಮಾ ಟೀಂ.
ಈ ವಿಡಿಯೋ ಅಪ್‍ಲೋಡ್ ಮಾಡೋಕೆ ನಿಮಗೆ ಕೆಲವು ಅರ್ಹತೆಗಳಿರಬೇಕು. ನೀವು ಪ್ರೀತಿ ಮಾಡಿರಲೇಬೇಕು. ಪ್ರೀತಿ ಮಾಡದೇ ಇರುವವರಿಗೆ ಕಥೆಯೊಂದು ಶುರುವಾಗಿದೆ ಸ್ಪರ್ಧೆಗೆ ನೋ ಎಂಟ್ರಿ. ಹಾಗೆ ಆಯ್ಕೆಯಾದವರನ್ನು ವಿವಿಧ ವಿಭಾಗಗಳಲ್ಲಿ ವಿಭಜಿಸಿ, ಟಿಕೆಟ್ ಕೊಟ್ಟು ಸಿನಿಮಾ ತೋರಿಸ್ತಾರೆ.
ಮೊದಲ ಆಡಿಟೋರಿಯಂನಲ್ಲಿ - ಪ್ರೀತಿಸಿ ಮದುವೆಯಾಗಿರಬೇಕು.
2ನೇ ಆಡಿಟೋರಿಯಂನಲ್ಲಿ - ಮದುವೆಯಾಗಿ ಪ್ರೀತಿಸಿರಬೇಕು. ಅರೇಂಜ್ಡ್ ಮ್ಯಾರೇಜ್ ಜೋಡಿ
3ನೇ ಆಡಿಟೋರಿಯಂನಲ್ಲಿ - ಭಗ್ನಪ್ರೇಮಿಗಳಿಗೆ ಮಾತ್ರ. ಹುಡುಗ/ಹುಡುಗಿ ಇಬ್ಬರಿಗೂ ಅವಕಾಶ
4ನೇ ಆಡಿಟೋರಿಯಂನಲ್ಲಿ - ಮದುವೆಯಾಗಿ ಯಶಸ್ವಿಯಾಗಿ 25 ವರ್ಷ ಸಂಸಾರ ನಡೆಸಿರುವ ಜೋಡಿಗಳು.
ಪ್ರತೀ ಆಡಿಟೋರಿಯಂನಲ್ಲಿ ಅಂದ್ರೆ, ಪ್ರೇಮಜೋಡಿ, ಮದುವೆ ಜೋಡಿ, ಭಗ್ನಪ್ರೇಮಿ ಹಾಗೂ ಯಶಸ್ವೀ ದಂಪತಿ ಜೋಡಿಗಳಲ್ಲಿ ತಲಾ 250 ಜನರಿಗೆ ಸಿನಿಮಾ ನೋಡೋಕೆ ಅವಕಾಶ ಇದೆ. ಅದ್ಸರಿ.. ನೀವು ಯಾವ ಗ್ರೂಪಿಗೆ ಬರುತ್ತೀರಿ..?