ರಾಜಕುಮಾರ, ಕಳೆದ ವರ್ಷದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ಚಿತ್ರಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ಬೊಂಬೆ ಹೇಳುತೈತೆ ಹಾಡು. ಎಷ್ಟರಮಟ್ಟಿಗೆ ಎಂದರೆ, ಬೆಳಗಾವಿಯ ಶಾಲೆಯೊಂದರಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರಲು ಆ ಹಾಡು ಸ್ಫೂರ್ತಿಯಾಗಿತ್ತು. ಆ ಹಾಡು ಕೇವಲ ಕನ್ನಡಿಗರಿಗಷ್ಟೇ ಮೋಡಿ ಮಾಡಿಲ್ಲ. ಜಪಾನೀಯರಿಗೂ ಮೋಡಿ ಮಾಡಿದೆ.
ಇತ್ತೀಚೆಗೆ ನಡೆದ ಜಪಾನ್ ಹಬ್ಬದಲ್ಲಿ ಜಪಾನ್ ಯುವಕನೊಬ್ಬ ಬೊಂಬೆ ಹೇಳುತೈತೆ ಹಾಡನ್ನು ವೇದಿಕೆ ಮೇಲೆ ಹಾಡಿರುವ ವಿಡಿಯೋ ವೈರಲ್ ಆಗಿದೆ. ಪುನೀತ್ ರಾಜ್‍ಕುಮಾರ್ ಮೇಲೆ ಚಿತ್ರಿತವಾಗಿದ್ದ ಗೀತೆಗೆ ಸಾಹಿತ್ಯ ಒದಗಿಸಿದ್ದವರು ನಿರ್ದೇಶಕ ಸಂತೋಷ್ ಆನಂದ್‍ರಾಮ್. ಹರಿಕೃಷ್ಣ ಸಂಗೀತ ನಿರ್ದೇಶನದ ಹಾಡಿಗೆ ಧ್ವನಿಯಾಗಿದ್ದವರು ಗಾಯಕ ವಿಜಯ್ ಪ್ರಕಾಶ್.
ಈ ಹಿಂದೆ ಜಪಾನಿಯರು ಕನ್ನಡದ ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಹಾಡನ್ನು ಇದೇ ರೀತಿ ಇಷ್ಟಪಟ್ಟಿದ್ದರು. ಅಣ್ಣಾವ್ರ ಹಾಡನ್ನು ಜಪಾನ್‍ನ ಹಲವು ಸಾಂಸ್ಕøತಿಕ ಉತ್ಸವಗಳಲ್ಲಿ ಬಳಸಿಕೊಂಡಿದ್ದರು. ಈಗ ಬೊಂಬೆ ಹೇಳುತೈತೆ ಸರದಿ.