ವೃತ್ರ.. ಏನಿದು ವೃತ್ರ..? ನೀವೇನೋ ತಪ್ಪಾಗಿ ಬರೆದಿರಬೇಕು. ವೃತ್ತ ಬರೆಯೋಕೆ ಬರೋಲ್ವೇನ್ರೀ.. ಅಂಥಾ ಮಾತ್ರ ಅನ್ನಬೇಡಿ. ಅದು ಕರೆಕ್ಟ್ ಆಗಿಯೇ ಇದೆ. ಅದು ವೃತ್ರ. ರಶ್ಮಿಕಾ ಮಂದಣ್ಣ ಅಭಿನಯದ ಹೊಸ ಸಿನಿಮಾ.
ಚಿತ್ರದಲ್ಲಿ ಇನ್‍ವೆಸ್ಟಿಗೇಷನ್ ಆಫೀಸರ್ ಹಾಗೂ ಚೆಸ್ ಆಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ರಶ್ಮಿಕಾಗೆ ಇನ್ವೆಸ್ಟಿಗೇಷನ್ ಆಫೀಸರ್ ಅನ್ನೋ ಪದವೇ ಖುಷಿ ಕೊಟ್ಟುಬಿಟ್ಟಿದೆ. ಆ ಪದದಲ್ಲೊಂದು ಫೋರ್ಸ್ ಇದೆ ಅನ್ನೋದು ಅದಕ್ಕೆ ಕಾರಣ.
ಚಿತ್ರದ ಟೈಟಲ್ ಮರ್ಮ ಏನು ಅಂದ್ರೆ, ಚಿತ್ರದಲ್ಲೇ ನೋಡಿ, ನಿಮಗೇ ಅರ್ಥವಾಗುತ್ತೆ. ಸದ್ಯಕ್ಕಂತೂ ಅದೊಂದು ಕಾಲ್ಪನಿಕ ಪದ ಅಂತಾರೆ ನಿರ್ದೇಶಕ ಗೌತಮ್.
ರಕ್ಷಿತ್ ಶೆಟ್ಟಿ ಟೀಂನಲ್ಲೇ ಕೆಲಸ ಮಾಡಿದ ಅನುಭವ ಇರುವ ಗೌತಮ್‍ಗೆ ಇದು ಮೊದಲ ಚಿತ್ರ. ಆಗಸ್ಟ್ ಮೊದಲ ವಾರದಿಂದ ಶೂಟಿಂಗ್ ಆರಂಭವಾಗಲಿದ್ದು, ಪೊಲೀಸ್ ಪಾತ್ರಕ್ಕೆ ಸಿದ್ಧಗೊಳ್ಳುತ್ತಿದ್ದಾರೆ ರಶ್ಮಿಕಾ.