` ಸಾಹಸ..ಸಸ್ಪೆನ್ಸ್..ಕ್ರೈಂ..ಥ್ರಿಲ್ಲರ್..ಸಂದೇಶಗಳ 6ನೇ ಮೈಲಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
6ne maili is perfect suspense thriller
6ne Malli Movie Image

ಒಂದು ತಂಡ.. ಪಶ್ಚಿಮ ಘಟ್ಟದ ಕಾಡಿನಲ್ಲಿ ಟ್ರಕ್ಕಿಂಗ್‍ಗೆ ಹೊರಡುತ್ತೆ. ಅಲ್ಲಿ 6ನೇ ಮೈಲಿಗಲ್ಲಿದೆ. ಅ ಜಾಗದಿಂದ ಟ್ರಕ್ಕಿಂಗ್‍ಗೆ ಹೋದವರು ಮಿಸ್ಸಾಗ್ತಾ ಹೋಗ್ತಾರೆ. ಅವರೆಲ್ಲಿ ಮಿಸ್ ಆದ್ರು..? ಅವರನ್ನು ಯಾರಾದರೂ ಕಿಡ್ನಾಪ್ ಮಾಡಿದರಾ..? ಕೊಂದರಾ..? ಆಗಬಾರದ ಅನಾಹುತವೇನಾದರೂ ಆಯಿತಾ..? ಕಾಡಿನಲ್ಲಿ ದಾರಿ ತಪ್ಪಿದರಾ..? ನಕ್ಸಲರ ಜಾಲಕ್ಕೆ ಸಿಕ್ಕರಾ..? ನೂರಾರು ಪ್ರಶ್ನೆಗಳು. ಕುತೂಹಲಗಳು. ಹುಡುಕುತ್ತಾ ಹೊರಟವರಿಗೆ ಕಾಣುವ ಸತ್ಯಗಳೇನು ಅನ್ನೋದೇ ಚಿತ್ರದ ಕಥೆ.

ಕೆಆರ್‍ಜೆ ಫಿಲಮ್ಸ್‍ನ ಮೊದಲ ಸಿನಿಮಾ 6ನೇ ಮೈಲಿ. ನಿರ್ಮಾಪಕ ಡಾ.ಶೈಲೇಂದ್ರ ಕುಮಾರ್‍ಗೆ ಇದು ಮೊದಲ ಸಿನಿಮಾ. ನಿರ್ದೇಶಕ ಸೀನಿ ಈ ಚಿತ್ರದಿಂದ ದೊಡ್ಡ ಬ್ರೇಕ್‍ನ ನಿರೀಕ್ಷೆಯಲ್ಲಿದ್ದಾರೆ. ಸಂಚಾರಿ ವಿಜಯ್, ಆರ್‍ಜೆ ನೇತ್ರಾ, ರಘು, ಆರ್‍ಜೆ ಸುದ್ದೇಶ್.. ಹೀಗೆ ಹಲವು ಯುವ ಮತ್ತು ಮಾಗಿದ ಕಲಾವಿದರ ಸಮ್ಮಿಲನ 6ನೇ ಮೈಲಿ.

ಸಿಂಪಲ್ಲಾಗ್ ಹೇಳ್ಬೇಕಂದ್ರೆ ಇದು ರೆಗ್ಯುಲರ್ ಸಿನಿಮಾ ಅಲ್ಲ. ಹೀಗಾಗಿಯೇ ಕುತೂಹಲ ಹುಟ್ಟಿಸಿದೆ ಈ ಸಿನಿಮಾ.

Ayushmanbhava Movie Gallery

Ellidhe Illitanaka Movie Gallery