ಚೈತ್ರಾ ರೆಡ್ಡಿ. ಇದು ಅವರ ಮೂಲ ಹೆಸರು. ಆದರೆ, ಪ್ರೇಕ್ಷಕರಿಗೆ ಆಕೆ ಶ್ರಾವಣಿ ಎಂದೇ ಪರಿಚಿತರು. ಅದು ಅವರು ನಟಿಸಿದ್ದ ಸೀರಿಯಲ್ ಪಾತ್ರ. ಹುಬ್ಬಳ್ಳಿ ಹುಡುಗಿಯಾಗಿರುವ ಚೈತ್ರಾ ರೆಡ್ಡಿ, ಈಗ ಜವಾರಿಹುಡುಗಿಯಾಗಿಯೇ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ವಿನೋದ್ ಪ್ರಭಾಕರ್ ಅಭಿನಯದ ಚಿತ್ರ ರಗಡ್ಗೆ ಚೈತ್ರಾ ರೆಡ್ಡಿ ನಾಯಕಿ.
10ನೇ ಕ್ಲಾಸ್ ಫೇಲಾಗಿ, ಎಷ್ಟು ಹುಡುಗರು ಪ್ರಪೋಸ್ ಮಾಡಿದರೂ ನಿರಾಕರಿಸುತ್ತಾ, ಕನಸಿನ ಹುಡುಗನಿಗಾಗಿ ಕಾಯುವ ಹುಡುಗಿಯಾಗಿ ನಟಿಸುತ್ತಿದ್ದಾರೆ ಚೈತ್ರಾರೆಡ್ಡಿ. ಹಾಗೆ ಇದ್ದ ಹುಡುಗಿ ವಿನೋದ್ ಪ್ರಭಾಕರ್ ಜೊತೆ ಲವ್ವಲ್ಲಿ ಬೀಳ್ತಾರೆ. ಜವಾರಿ ಭಾಷೆಯೇ ಚಿತ್ರದ ಹೈಲೈಟ್ ಎಂದಿದ್ದಾರೆ ಚೈತ್ರಾ ರೆಡ್ಡಿ. ಶ್ರೀಮಹೇಶ್ ನಿರ್ದೇಶನದ ಚಿತ್ರದ ಶೂಟಿಂಗ್ ಶುರುವಾಗಿದೆ.