` ಮೈಲಿ.. 6ನೇ ಮೈಲಿ.. ಮೈ ಮರೆತರೆ ಸಾವಿನ ಬೇಲಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
6ne maili song rises heart beat
6ne Song Image

ಮೈಲಿ.. ಇದು ಮೈಲಿ.. ಮೈಲಿ.. ಇದು 6ನೇ ಮೈಲಿ..ಬೇಲಿ.. ಇದು ಬೇಲಿ.. ಮೈ ಮರೆತ್ರೆ ಸಾವಿನ ಬೇಲಿ.. ಇದು 6ನೇ ಮೈಲಿ ಚಿತ್ರದಲ್ಲಿ ಏಕೈಕ ಹಾಡು. ಸಸ್ಪೆನ್ಸ್, ಥ್ರಿಲ್ಲರ್ ಕಥೆಯಲ್ಲಿ ಹಾಡುಗಳಿಗೆ ಜಾಗವಿಲ್ಲ. ಈ ಹಾಡು ಇರೋದು ಕೂಡಾ ಡೆಟ್ ಮೆಟಲ್ ಪ್ಯಾಟ್ರನ್‍ನಲ್ಲಿ. 6ನೇ ಮೈಲಿ ಚಿತ್ರದ ವಿಶೆಷತೆಗಳಲ್ಲಿ ಇದೂ ಒಂದು.

2010ರಿಂದ 2014ರವರೆಗೆ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕೊಲೆ, ಅಪಹರಣ, ಅತ್ಯಾಚಾರಗಳು ಸಾಮಾನ್ಯವಾಗಿ ಹೋಗಿದ್ದವು. ಆಗ ನಡೆದ ಒಂದು ಸತ್ಯಘಟನೆಯನ್ನಿಟ್ಟುಕೊಂಡೇ ಚಿತ್ರ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸೀನಿ.

ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಆರ್.ಜೆ.ನೇತ್ರಾ, ಆರ್.ಜೆ.ರಾಘವ ಮೊದಲಾದವರು ನಟಿಸಿರುವ ಸಿನಿಮಾ. ಹಾಡುಗಳನ್ನು ಪುನೀತ್ ರಾಜ್‍ಕುಮಾರ್, ತಮ್ಮದೇ ಕಂಪೆನಿ ಮೂಲಕ ರಿಲೀಸ್ ಮಾಡಿದ್ದರೆ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಆಶೀರ್ವದಿಸಿ.. ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಟ್ರೇಲರ್‍ನಲ್ಲಿ ನೋಡಿದರೆ,  ಚಿತ್ರದ ಮೇಕಿಂಗ್ ಅತ್ಯುನ್ನತ ಮಟ್ಟದಲ್ಲಿದೆ ಎನಿಸುತಿದೆ. ಡಾ.ಶೈಲೇಂದ್ರ ಕುಮಾರ್ ನಿರ್ಮಾಣದ ಚಿತ್ರ, ಇದೇ ವಾರ ತೆರಗೆ ಬರುತ್ತಿದೆ.

Yajamana Movie Gallery

Bazaar Movie Gallery