` ಫಸ್ಟ್‍ಲುಕ್ ರೆಡಿ.. ನಿರ್ಮಾಪಕರು ಯಾರು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ebella first look is ready
Ebella First Look

ಕಥೆ ರೆಡಿಮಾಡಿಟ್ಟುಕೊಂಡು, ನಿರ್ಮಾಪಕರನ್ನೋ, ಸ್ಟಾರ್‍ಗಳನ್ನೋ ಒಪ್ಪಿಸಿ ಸಿನಿಮಾ ಮಾಡುವುದು ಗಾಂಧಿನಗರದ ಶೈಲಿ. ಆದರೆ, ಇಲ್ಲೊಂದು ಚಿತ್ರತಂಡ ವಿಭಿನ್ನ ಹಾದಿ ತುಳಿದಿದೆ. ಚಿತ್ರಕ್ಕೆ ಬೇಕಾದ ಕಥೆ, ಚಿತ್ರಕಥೆ, ಕಲಾವಿದರು, ತಂತ್ರಜ್ಞರು ಎಲ್ಲರನ್ನೂ ಸಿದ್ಧ ಮಾಡಿಟ್ಟುಕೊಂಡು ನಿರ್ಮಾಪಕರ ಹುಡುಕಾಟಕ್ಕೆ ಹೊರಟಿದೆ. ಅಂದಹಾಗೆ ಈ ಚಿತ್ರದ ಹೆಸರು ಇಬೆಲ್ಲ. ಇರುವೆ ಬೆಲ್ಲದ ಕಥೆ ಅನ್ನೋದು ಟ್ಯಾಗ್‍ಲೈನ್.

ರಂಗಭೂಮಿ ನಾಟಕಗಳಲ್ಲಿ ವಿಶಿಷ್ಟ ಧ್ವನಿಯಿಂದಲೇ ಗುರುತಿಸಿಕೊಂಡಿರುವ ಮಂಜುನಾಥ್ ಮುನಿರಾಮಪ್ಪ ಅವರ ಚೊಚ್ಚಲ ಪ್ರಯತ್ನ ಇದು. ಕನಸಿನ ಮನೆ ಅವರ ಪ್ರಸಿದ್ಧ ನಾಟಕ. ಆ ನಾಟಕವನ್ನೇ ಸಿನಿಮಾಗೆ ಒಗ್ಗಿಸುವ ಪ್ರಯತ್ನದಲ್ಲಿದ್ದಾರೆ ಮಂಜುನಾಥ್. ಆ ಪ್ರಯತ್ನದ ಭಾಗವಾಗಿ ಚಿತ್ರದ ಫಸ್ಟ್‍ಲುಕ್‍ನ್ನೂ ಸಿದ್ಧಗೊಳಿಸಿ ಬಿಡುಗಡೆ ಮಾಡಿದ್ದಾರೆ.

ಚಿತ್ರಕ್ಕೆ ಅಕ್ಷತಾ ಎಂಬ ಹುಡುಗಿ ನಾಯಕಿ. ತನ್ನ ಜೀವನಕ್ಕಾಗಿ, ಮಹತ್ವಾಕಾಂಕ್ಷೆ ಸಾಧಿಸಲು, ಗುರಿ ಮುಟ್ಟಲು ಯಾವುದಕ್ಕೂ ಹಿಂಜರಿಯದ, ದೇಹವನ್ನೂ ಒಪ್ಪಿಸಿಕೊಳ್ಳಲು ಸಿದ್ಧಳಾಗುವ ನಿವೇದಿತಾ ಎಂಬ ಹೆಣ್ಣಿನ ಸುತ್ತ ನಡೆಯುವ ಕಥೆ ಇದು. ಹೀಗಾಗಿಯೇ ಹಲವು ನಟಿಯರು ಪಾತ್ರವನ್ನು ನಿರಾಕರಿಸಿದರಂತೆ. 

ಎಲ್ಲವೂ ಅಂತಿಮಗೊಂಡಿದೆ. ನಿರ್ಮಾಪಕರೇ ಸಿಕ್ಕಿಲ್ಲ. ಫಸ್ಟ್‍ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ, ಟೀಸರ್‍ನ್ನೂ ಸಿದ್ಧಪಡಿಸಲಿದೆ. ಅದನ್ನು ಮುಂದಿಟ್ಟುಕೊಂಡೇ ನಿರ್ಮಾಪಕರನ್ನು ಸಂಪರ್ಕಿಸುವ ಯೋಜನೆ ಹಾಕಿಕೊಂಡಿದೆ ಇಬೆಲ್ಲ ತಂಡ.

Ayushmanbhava Movie Gallery

Kabza Movie Launch Gallery