` ಅಸತೋಮಾ ಸದ್ಗಮಯ.. ಹೊಸ ಪ್ರತಿಭೆಗಳದ್ದೇ ಬೆಳಕು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
asathoma sadgamaya makes way for new comers
Asathoma Sadgamaya Movie Image

ಅಸತೋಮಾ ಸದ್ಗಮಯ ಚಿತ್ರ.. ರಿಲೀಸ್‍ಗೆ ರೆಡಿಯಾಗಿದೆ. ಚಿತ್ರದ ವಿಶೇಷವೆಂದರೆ, ಚಿತ್ರದಲ್ಲಿ ಹೊಸ ಪ್ರತಿಭೆಗಳ ಸಮ್ಮಿಲನ. ಹಾಗೆ ನೋಡಿದರೆ, ಚಿತ್ರದ ನಾಯಕಿ ರಾಧಿಕಾ ಚೇತನ್ ಅವರೇ ಸೀನಿಯರ್ ಎನ್ನಬೇಕು. ಉಳಿದಂತೆ ಹೊಸಬರೇ ಹೆಚ್ಚು ಇರುವ ಸಿನಿಮಾ ಅಸತೋಮಾ ಸದ್ಗಮಯ.

ಆದರೆ, ಚಿತ್ರದ ಟೀಸರ್‍ಗಳಲ್ಲಾಗಲೀ, ಹಾಡುಗಳಲ್ಲಾಗಲೀ.. ಇದು ಹೊಸಬರ ಸಿನಿಮಾ ಎನ್ನಿಸದೇ ಅನುಭವಿಗಳ ಸಿನಿಮಾ ಎನಿಸುತ್ತೆ. 

ಚಿತ್ರದ ನಿರ್ದೇಶಕ ರಾಜೇಶ್ ಸವಣೂರು ಅವರಿಗೆ ಇದು ಚೊಚ್ಚಲ ಸಿನಿಮಾ. ಸಿನಿಮಾ ಹೊಸದಾದರೂ, ಈ ಮೊದಲು ಜಾಹೀರಾತು, ಸಾಕ್ಷ್ಯಚಿತ್ರಗಳಲ್ಲಿ ಅನುಭವವಿದೆ. ನಿರ್ಮಾಪಕರೂ ಹೊಸಬರೇ. ಅಶ್ವಿನ್ ಜಿ ಪರೇರಾ. ಅವರು ಉದ್ಯಮಿ ಹಾಗೂ ರಾಜಕಾರಣಿ. ಜೊತೆಗೆ ಕನಸುಗಾರ. ಚಿತ್ರದ ಕ್ವಾಲಿಟಿಯಲ್ಲಿ ಅದು ಕಾಣಿಸುತ್ತೆ.

ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ಕಥೆ ಚಿತ್ರದಲ್ಲಿದೆಯಾದರೂ, ಅದು ಕೇವಲ ಸಂದೇಶವಾಗಿ ಇಲ್ಲ. ಮನರಂಜನೆಯ ಜೊತೆ ಜೊತೆಗೇ ಕಥೆ ಹೇಳಲಾಗಿದೆ. 

ಸಂಗೀತ ವಹಾಬ್ ಸಲೀಂ ಅವರದ್ದು, ಸಂಕಲನ ರವಿಚಂದ್ರನ್ ಅವರದ್ದು. ರಾಧಿಕಾ ಚೇತನ್‍ಗೆ ಜೊತೆಯಾಗಿರೋದು ಕಿರಣ್ ರಾಜ್. ಅವರಿಗೆ ಇದು ಜಸ್ಟ್ 2ನೇ ಸಿನಿಮಾ. ಬಿಗ್‍ಬಾಸ್ ಖ್ಯಾತಿಯ ಲಾಸ್ಯ, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಚಿತ್ರಾಲಿ ಚಿತ್ರದ ಮೆರುಗು ಹೆಚ್ಚಿಸಿದ್ದಾರೆ.