ದೃಶ್ಯ ಚಿತ್ರದಂತಾ ಥ್ರಿಲ್ಲರ್ ಮೂಲಕ ಮತ್ತೆ ಹಿಟ್ ಸಿನಿಮಾ ಕೊಟ್ಟ ರವಿಚಂದ್ರನ್, ಈಗ ಮತ್ತೂ ಒಂದು ಥ್ರಿಲ್ಲರ್ ಕಥೆ ಮಾಡುತ್ತಿದ್ದಾರೆ. ಈ ಬಾರಿ ರವಿಚಂದ್ರನ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡುತ್ತಿರುವುದು ಮಂಜು ಬ್ಯಾನರ್‍ಗೆ. ಕೆ. ಮಂಜು ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಿನಿಮಾಗೆ ರವಿಚಂದ್ರನ್ ಹೀರೋ. ಜಿಗರ್‍ಥಂಡ ಖ್ಯಾತಿಯ ಶಿವಗಣೇಶ್ ನಿರ್ದೇಶನವಿರುತ್ತೆ.
ಈ ಸಿನಿಮಾ ತಮಿಳಿನ ದುರುವಂಗಲ್ ಪದಿನಾರು ಚಿತ್ರದ ರೀಮೇಕ್. ತೆಲುಗಿನಲ್ಲಿ 16 ಹೆಸರಲ್ಲಿ ಡಬ್ಬಿಂಗ್ ಆಗಿದ್ದ ಸಿನಿಮಾವನ್ನ ಕನ್ನಡಕ್ಕೆ ತರುತ್ತಿದ್ದಾರೆ ಕೆ. ಮಂಜು. ಒಂದು ಕೊಲೆಯ ಸುತ್ತಲೇ ಸುತ್ತುವ ಕಥೆ, ಕಟ್ಟಕಡೆಯವರೆಗೂ ಕುತೂಹಲ ಹುಟ್ಟಿಸುತ್ತೆ. ಚಿತ್ರದಲ್ಲಿ ರವಿಚಂದ್ರನ್ ಅವರದ್ದು ತನಿಖಾಧಿಕಾರಿಯ ಪಾತ್ರ. ಈ ಹಿಂದೆ ಮಂಜು ಜೊತೆ ಸಾಹುಕಾರ, ಕಳ್ಳಮಳ್ಳಸುಳ್ಳ, ಒಡಹುಟ್ಟಿದವಳು, ರಾಜಕುಮಾರಿ.. ಮೊದಲಾದ ಚಿತ್ರ ಮಾಡಿದ್ದ ರವಿಚಂದ್ರನ್, ಮತ್ತೊಮ್ಮೆ ಮಂಜು ಜೊತೆಯಾಗಿದ್ದಾರೆ.