` 4 ದಿನ, 7 ಪಾತ್ರ.. ಕಥೆಯೊಂದು ಶುರುವಾಗಿದೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
diganth, pooja devariya in katheyondhu shuruvagidhe
Katheyondhu Shuruvagidhe Movie Image

ಕಥೆಯೊಂದು ಶುರುವಾಗಿದೆ.. ಇದು ದಿಗಂತ್ ಅಭಿನಯದ ಸಿನಿಮಾ. ಚಿತ್ರಕ್ಕೆ ಸನ್ನಾ ಹೆಗ್ಡೆ ನಿರ್ದೇಶನವಿದೆ. ಪರಂವಾ ಸ್ಟುಡಿಯೋಸ್ ನಿರ್ಮಾಣದ ಈ ಸಿನಿಮಾದ ವಿಶೇಷವೇ 7 ಪಾತ್ರ, ಇಡೀ ಸಿನಿಮಾದ ಕಥೆಯಲ್ಲಿ 4 ದಿನದ ಘಟನೆಗಳಿರುತ್ತವೆ. ಸೋಮವಾರ ಶುರುವಾಗುವ ಕಥೆ, ಗುರುವಾರ ಅಂತ್ಯಗೊಳ್ಳುತ್ತೆ. ಈ 4 ದಿನದಲ್ಲಿ 7 ಪಾತ್ರಗಳು ಹೇಗೆಲ್ಲ ವರ್ತಿಸುತ್ತವೆ, ಬದಲಾಗುತ್ತವೆ ಅನ್ನೋದೇ ಚಿತ್ರದ ಸ್ವಾರಸ್ಯ.

3 ಜನರೇಷನ್‍ನ ಕಥೆ ಇಲ್ಲಿದೆಯಂತೆ. 20+ನ ಒಂದು ಜೋಡಿ, 30+ನ ಇನ್ನೊಂದು ಜೋಡಿ ಹಾಗೂ 60+ನ  ಮತ್ತೊದು ಜೋಡಿ.. ಅವರ ಚಿಂತನೆ, ಬದುಕು.. ಹೀಗೆ ಕಥೆ ಮನಸ್ಸಿಗೆ ನಾಟುತ್ತಾ ಹೋಗುತ್ತೆ.

ಶ್ರೇಯಾ ಅಂಚನ್ ಹಾಗೂ ಅಶ್ವಿನ್ ರಾವ್ ಅವರದ್ದು 20+ ಜೋಡಿಯಾದರೆ, ದಿಗಂತ್ ಹಾಗೂ ಪೂಜಾ ದೇವರಿರಯಾ 30+ ಜೋಡಿ. ಅರುಣಾ ಬಾಲರಾಜ್, ಬಾಲರಾಜ್ ಹಿರಣ್ಣಯ್ಯ 60+ ವಯೋಮಾನಕ್ಕೆ. ಮತ್ತೊಂದು ಪಾತ್ರ ಸಪೋರ್ಟಿವ್ ಆಗಿರುತ್ತೆ.

ಹೀಗೆ 7 ಪಾತ್ರಗಳ ಮುಖಾಂತರ ಬದುಕಿನ ಕಥೆ ಹೇಳುತ್ತೇವೆ. ಕಥೆಯೊಂದು ಶುರುವಾಗಿದೆ ಎನ್ನುವ ಟೈಟಲ್‍ನಲ್ಲೇ ಸಿನಿಮಾದ ಕಥೆಯೂ ಇದೆ. ಇದು ಸನ್ನಾ ಹೆಗ್ಡೆ ನಿರ್ದೇಶನದ ಕಥೆಯೊಂದು ಶುರುವಾಗಿದೆ ವಿಶೇಷಗಳಲ್ಲಿ ಒಂದು.