ಅಂಡರ್ವಲ್ರ್ಡ್, ರೌಡಿಸಂ ಕಥೆಗಳನ್ನು ಹೇಳೋದ್ರಲ್ಲಿ ರವಿಶ್ರೀವತ್ಸ ಎತ್ತಿದ ಕೈ. ಅವರಿಗೆ ಹೆಸರು ತಂದುಕೊಟ್ಟಿದ್ದೂ ಅಂಥವೇ ಸಿನಿಮಾ. ಲವರ್ ಬಾಯ್ ಆಗಿ ಎಂಟ್ರಿ ಕೊಟ್ಟ ಆದಿತ್ಯಗೂ ಕೊನೆಗೆ ಹೆಸರು, ಖ್ಯಾತಿ ಕೊಟ್ಟಿದ್ದು ರೌಡಿಸಂ ಚಿತ್ರಗಳೇ. ಅದರಲ್ಲೂ ಇಬ್ಬರೂ ಜೊತೆಯಾಗಿ ಮಾಡಿದ ಡೆಡ್ಲಿ ಸೋಮ ಹಾಗೂ ಡೆಡ್ಲಿ 2 ಚಿತ್ರಗಳು ಸೂಪರ್ ಹಿಟ್ ಆಗಿ ಮಿಂಚಿದ್ದವು. ಈಗ ಆ ಜೋಡಿ ಮತ್ತೆ ಒಂದಾಗುತ್ತಿದೆ.
ಒಟ್ಟಿಗೇ ಸಿನಿಮಾ ಮಾಡ್ತಿರೋದು ನಿಜ. ಆದರೆ, ಇದು ರೌಡಿಸಂ ಕಥೆಯಲ್ಲ. ಅಂಡರ್ವಲ್ರ್ಡ್ ಕಥೆಯಲ್ಲ. ವಿಶೇಷವಾದ ಕಥೆ ಮತ್ತು ವಿಶೇಷ ಟೈಟಲ್ ಜೊತೆ ಬರಲಿದ್ದೇವೆ ಎಂದಿದ್ದಾರೆ ಆದಿತ್ಯ. ವೇಯ್ಟ್ ಮಾಡಿ.