` ಎಕ್ಸ್‍ಕ್ಯೂಸ್ ಮಿ ಸುನಿಲ್ ರಾವ್ ಮದುವೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
excuse me fame sunil marries shreya iyer
Sunil Rao Marries Shreya Iyer

ಎಕ್ಸ್‍ಕ್ಯೂಸ್ ಮಿ ಚಿತ್ರದ ಮೂಲಕ ಬೆಳಕಿಗೆ ಬಂದಿದ್ದ ಕಲಾವಿದ ಸುನಿಲ್ ರಾವ್. ಆ ನಂತರ ಬಾ ಬಾರೋ ರಸಿಕ, ಚಪ್ಪಾಳೆ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಸುನಿಲ್ ರಾವ್, ಈಗ ಮತ್ತೊಮ್ಮೆ ತುರ್ತು ನಿರ್ಗಮನ ಚಿತ್ರದ ಮೂಲಕ ಕನ್ನಡಕ್ಕೆ ರೀ ಎಂಟ್ರಿಯಾಗುತ್ತಿದ್ದಾರೆ. ಈ ಸಮದಯದಲ್ಲೇ ಅವರು ಹೊಸ ಬದುಕಿಗೂ ಎಂಟ್ರಿ ಕೊಟ್ಟಿದ್ದಾರೆ. 

ಗೆಳತಿ ಶ್ರೇಯಾ ಅವರನ್ನು ಮದುವೆಯಾಗಿದ್ದಾರೆ. ಬೆಂಗಳೂರಿನಲ್ಲಿಯೇ ನಡೆದ ಮದುವೆಗೆ ನಟಿ ಸುಧಾರಾಣಿ, ಹೇಮಾ ಪಂಚಮುಖಿ, ಅನುಪಮಾ ಗೌಡ, ಶಮಿತಾ ಮಲ್ನಾಡ್, ಚಿನ್ಮಯ್, ಸಿಂಚನ್ ದೀಕ್ಷಿತ್.. ಸೇರಿದಂತೆ ಹಲವರು ಭಾಗವಹಿಸಿದ್ದರು. ಶ್ರೇಯಾ, ಸುನಿಲ್ ರಾವ್ ಅವರ ಜೊತೆಯಲ್ಲಿ ಲೂಸ್ ಕನೆಕ್ಷನ್ ವೆಬ್ ಸಿರೀಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ.