Print 
sa ra govindu, kfcc election,

User Rating: 0 / 5

Star inactiveStar inactiveStar inactiveStar inactiveStar inactive
 
sa ra govindu announces his support to chinnegowda, a ganesh, km veeresh
Sa Ra Govindu

ಕರ್ನಾಟಕ ಫಿಲಂಚೇಂಬರ್‍ಗೆ ಇದೇ ಜೂನ್ 26ಕ್ಕೆ ಚುನಾವಣೆ. ಕನ್ನಡ ಚಿತ್ರರಂಗದ ಹೃದಯವಾಗಿರುವ ಫಿಲಂಚೇಂಬರ್ ಅಧ್ಯಕ್ಷರಾಗಿದ್ದವರು ಸಾ.ರಾ.ಗೋವಿಂದು. ಅವರ ಅಧಿಕಾರಾವಧಿ ಮುಕ್ತಾಯವಾಗಿದ್ದು, ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ಶುರುವಾಗಿದೆ. ಸಹಜವಾಗಿಯೇ ಸಾ.ರಾ.ಗೋವಿಂದು ಅವರ ಬೆಂಬಲ ಯಾರಿಗೆ ಎಂಬ ಕುತೂಹಲ ಎಲ್ಲರಿಗೂ ಇದೆ. 

ಸಾ.ರಾ.ಗೋವಿಂದು ಬಹಿರಂಗವಾಗಿಯೇ ತಮ್ಮ ಬೆಂಬಲ ಯಾರಿಗೆ ಅನ್ನೋದನ್ನು ಘೋಷಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಚಿನ್ನೇಗೌಡ ಅವರಿಗೆ ಬೆಂಬಲ ನೀಡಿರುವ ಗೋವಿಂದು, ಕಾರ್ಯದರ್ಶಿ ಸ್ಥಾನಕ್ಕೆ ಗಣೇಶ್ ಬೆನ್ನಿಗೆ ನಿಂತಿದ್ದಾರೆ. ಇನ್ನು ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿರುವ ಕೆ.ಎಂ.ವೀರೇಶ್ (ಚಿತ್ರಲೋಕ ವೀರೇಶ್) ಅವರಿಗೆ ಬೆಂಬಲ ನೀಡಿರುವ ಸಾ.ರಾ.ಗೋವಿಂದು, ಅವರಿಗೇ ಮತ ಚಲಾಯಿಸುವಂತೆ ಚೇಂಬರ್ ಸದಸ್ಯರಿಗೆ ಮನವಿ ಮಾಡಿದ್ದಾರೆ.