` ದಡ್ಡನನ್ನು ಮೆಚ್ಚಿಕೊಂಡ ಬುದ್ದಿವಂತರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
daddha song goes viral
Dadda Video Song

ದಡ್ಡ.. ದಡ್ಡ.. ದಡ್ಡ.. ದಡ್ಡ.. ಈ ಹಾಡು ಈಗ ವೈರಲ್ ಆಗುತ್ತಿದೆ. ಇದು ಸಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಚಿತ್ರದ ಮೊದಲ ಹಾಡು. ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರದ ಈ ಹಾಡಿನಲ್ಲಿ ಮನರಂಜನೆಯೂ ಇದೆ.. ಸಂದೇಶವೂ ಇದೆ. ಹೀಗಾಗಿಯೇ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೋಡ ಮುಸುಕಿದ ಭಾನು.. ರೆಕ್ಕೆ ತಿರುಗದ ಫ್ಯಾನು.. ಸಿಂಗಲ್ ಆದ್ಯಲ್ಲೋ ನೀನು.. ಪ್ರವೀಣಾ.. ಪ್ರವೀಣಾ.. ದಡ್ಡ ದಡ್ಡ ಎಂದು ಆರಂಭವಾಗುವ ಸಾಲು ನಗೆಯುಕ್ಕಿಸುತ್ತಲೇ ಚಿಂತನೆಗೆ ಹಚ್ಚಿಸುತ್ತೆ. ಕಿರಿಕ್ ಪಾರ್ಟಿ ನಂತರ ರಿಷಬ್ ಶೆಟ್ಟಿ ನಿರ್ದೇಶಿಸಿರುವ ಚಿತ್ರದ ಈ ಹಾಡು ಗೆಲ್ಲುವ ಮೂಲಕ, ಚಿತ್ರತಂಡವೂ ಖುಷಿಯಾಗಿದೆ.

Rambo 2 Movie Gallery

Rightbanner02_kumari_21f_inside

Kumari 21 Movie Gallery