` ದಿ ವಿಲನ್ ಟೀಸರ್‍ಗೇ 500 ರೂ. ಟಿಕೆಟ್.. ಯಾಕೆ ಗೊತ್ತಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
the villain teaser on june 28th
The Villain Movie Image

ದಿ ವಿಲನ್. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಶಿವರಾಜ್‍ಕುಮಾರ್, ಸುದೀಪ್ ಮತ್ತು ಪ್ರೇಮ್ ಹಾಗೂ ಸಿ.ಆರ್.ಮನೋಹರ್ ಕಾಂಬಿನೇಷನ್ ಚಿತ್ರದ ಬಗ್ಗೆ ಗೌರಿಶಂಕರದಷ್ಟು ನಿರೀಕ್ಷೆ ಹುಟ್ಟಿಸಿದೆ. ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲವಾದರೂ, ಹೇಳಿದಂತೆ ಜೂನ್ ತಿಂಗಳಲ್ಲೇ ಚಿತ್ರದ ಟೀಸರ್ ಹೊರತರುತ್ತಿದ್ದಾರೆ ನಿರ್ದೇಶಕ ಪ್ರೇಮ್. ಜೂನ್ 28ರಂದು ಬೆಂಗಳೂರಿನ ಜಿ.ಟಿ.ಮಾಲ್‍ನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. 

ಕನ್ನಡ ಚಿತ್ರರಂಗದಲ್ಲಿ ಹಲವು ಹೊಸತುಗಳಿಗೆ ಮುನ್ನುಡಿ ಬರೆಯುತ್ತಿರುವ ಚಿತ್ರ, ಟೀಸರ್ ಬಿಡುಗಡೆಯಲ್ಲೂ ವಿಭಿನ್ನ ಹಾದಿ ತುಳಿದಿದೆ. ಚಿತ್ರದ ಟೀಸರ್ ಪ್ರದರ್ಶನಕ್ಕೂ ಟಿಕೆಟ್ ನೀಡಲಾಗುತ್ತಿದೆ. ಒಂದು ಟಿಕೆಟ್‍ಗೆ 500 ರೂ.

ಶಿವಣ್ಣ ಮತ್ತು ಸುದೀಪ್ ಇಬ್ಬರಿಗೂ ಪ್ರತ್ಯೇಕ ಟೀಸರ್ ರೆಡಿ ಮಾಡಲಾಗಿದೆಯಂತೆ. ಅಂದಹಾಗೆ ಟೀಸರ್ ನೋಡೋಕೆ ನೀವು ಕೊಡೋ 500 ರೂ. ವ್ಯರ್ಥವಾಗುವುದಿಲ್ಲ. ಆ ಹಣ ಕನ್ನಡ ಚಿತ್ರರಂಗದಲ್ಲಿ ಸಂಕಷ್ಟದಲ್ಲಿರುವ ನಿರ್ದೇಶಕರ ನೆರವಿಗಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ. ಅದೇ ದಿನ ಹಣವನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಲುಪಿಸಲು ಚಿತ್ರತಂಡ ಪ್ಲಾನ್ ಮಾಡಿದೆ. ಸಿಎಂ ಮೂಲಕವೇ ಸಂಕಷ್ಟದಲ್ಲಿರುವ ಆಯ್ದ ನಿರ್ದೇಶಕರಿಗೆ ಈ ಮೊತ್ತ ತಲುಪಲಿದೆ ಎಂದು ಹೇಳಿಕೊಂಡಿದೆ ಚಿತ್ರತಂಡ. 

#

The Terrorist Movie Gallery

Thayige Thakka Maga Movie Gallery