` ಚಲನಚಿತ್ರ ಅಕಾಡೆಮಿಗೆ ನಾಗತಿಹಳ್ಳಿ ಅಧ್ಯಕ್ಷ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nagathihalli chandrashekar appointmed as kca president
Nagathihalli Chandrashekar Image

ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ಅಧಿಕೃತವಾಗಿ ಆದೇಶ ಹೊರಡಿಸಿದೆ. ಸಿನಿಮಾ, ಸಾಹಿತ್ಯ, ಅಂಕಣ, ಕಿರುತೆರೆ, ಶಿಕ್ಷಣ, ಸಮಾಜಸೇವೆ.. ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ಬಹುಮುಖ ಪ್ರತಿಭೆ. ರಾಜೇಂದ್ರ ಸಿಂಗ್ ಬಾಬು ಅವರು 3 ವರ್ಷಗಳಿಂದ ನಿರ್ವಹಿಸುತ್ತಿದ್ದ ಸ್ಥಾನವನ್ನು ಈಗ ನಾಗತಿಹಳ್ಳಿ ಚಂದ್ರಶೇಖರ್ ತುಂಬಲಿದ್ದಾರೆ.

ಬಾ ನಲ್ಲೆ ಮಧುಚಂದ್ರಕೆ, ಉಂಡೂಹೋದ ಕೊಂಡೂಹೋದ, ಕೊಟ್ರೇಶಿ ಕನಸು, ನನ್ನ ಪ್ರೀತಿಯ ಹುಡುಗಿ, ಅಮೆರಿಕ ಅಮೆರಿಕ, ಅಮೃತಧಾರೆ.. ಹೀಗೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ನಾಗತಿಹಳ್ಳಿಯವರಿಗೆ 3 ರಾಷ್ಟ್ರಪ್ರಶಸ್ತಿ, 13 ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ 2 ಫಿಲಂಫೇರ್ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್, ಜೀವಮಾನ ಸಾಧನೆಗಾಗಿ ಪುಟ್ಟಣ್ಣ ಕಣಗಾಲ್ ಪುರಸ್ಕಾರವನ್ನೂ ಪಡೆದಿರುವ ನಾಗತಿಹಳ್ಳಿ ಚಂದ್ರಶೇಖರ್, ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಕುಟುಂಬಕ್ಕೂ ಆಪ್ತರು.

#

The Terrorist Movie Gallery

Thayige Thakka Maga Movie Gallery