` ಸುನಿಲ್ ಶೆಟ್ಟಿ ಕನ್ನಡ ಸಿನಿಮಾ..ಪೈಲ್ವಾನ್ ಮಾತ್ರ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
suniel shetty not acting in pirangipura
Suniel Shetty's tweet

ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ, ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೃಷ್ಣ ನಿರ್ದೇಶನದ ಚಿತ್ರದ ಒಂದು ಹಂತದ ಶೂಟಿಂಗ್ ಕೂಡಾ ಈಗಾಗಲೇ ಮುಕ್ತಾಯವಾಗಿದೆ. ಹೀಗಿರುವಾಗಲೇ ಪಿರಂಗಿಪುರ ಎಂಬ ಚಿತ್ರವನ್ನು ಸುನಿಲ್ ಶೆಟ್ಟಿ ಒಪ್ಪಿಕೊಂಡಿದ್ದಾರೆ. ರಾಜನ ಪಾತ್ರ ಮಾಡುತ್ತಿರುವ ಸುನಿಲ್ ಶೆಟ್ಟಿ, ಆಗಸ್ಟ್ ತಿಂಗಳಲ್ಲಿ 30 ದಿನಗಳ ಕಾಲ್‍ಶೀಟ್ ನೀಡಿದ್ದಾರೆ ಎಂದು ಹೇಳಿಕೊಂಡಿದ್ದರು ಪಿರಂಗಿಪುರ ನಿರ್ದೇಶಕ ಜನಾರ್ದನ್.

ಈ ಕುರಿತು ಚಿತ್ರಲೋಕಕ್ಕೆ ಪ್ರತಿಕ್ರಿಯೆ ನೀಡಿರುವ ಸುನಿಲ್ ಶೆಟ್ಟಿ, ಹಲವು ಚಿತ್ರ ನಿರ್ಮಾಪಕರನ್ನು ನನ್ನನ್ನು ಸಂಪರ್ಕಿಸಿರುವುದು ನಿಜ. ನನಗೂ ಕನ್ನಡದಲ್ಲಿ ಮಾಡುವ ಉತ್ಸಾಹ ಇದೆ. ಆದರೆ, ಸದ್ಯಕ್ಕೆ ನಾನು ಒಪ್ಪಿಕೊಂಡಿರುವುದು ಪೈಲ್ವಾನ್ ಚಿತ್ರ ಮಾತ್ರ. ಉಳಿದಂತೆ ಯಾವುದೇ ಚಿತ್ರ ಫೈನಲ್ ಆಗಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. 

ಸಂಚಾರಿ ವಿಜಯ್ ನಾಯಕರಾಗಿರುವ ಪಿರಂಗಿಪುರ ಚಿತ್ರ, ಕನ್ನಡ, ತಮಿಳು, ಹಿಂದಿ ಹಾಗೂ ತೆಲುಗಿನಲ್ಲಿ ಸಿದ್ಧವಾಗುತ್ತಿದೆ.

Related Articles :-

Not Signed Pirangipura, Says Sunil Shetty

Sunil Shetty In Another Kannada Film

Padarasa Movie Gallery

Kumari 21 Movie Gallery