` ಕ್ರೇಜಿಯ ಅಪೂರ್ವ.. ಶರಣ್ ವಿಕ್ಟರಿ 2ಗೆ ಜೋಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
apoorva is heroine for sharan's vitory 2
Apoorva, Sharan Image

ರ್ಯಾಂಬೋ 2 ಸಕ್ಸಸ್ ಖುಷಿಯಲ್ಲಿರುವ ಶರಣ್, ಈಗ ಫುಲ್ ಬ್ಯುಸಿ. ಒಂದು ಕಡೆ ರಾಗಿಣಿ ದ್ವಿವೇದಿ ಜೊತೆಗಿನ ಚಿತ್ರದ ಚಿತ್ರೀಕರಣ ಅಮೆರಿಕದಲ್ಲಿ ಬಿರುಸಿನಿಂದ ಸಾಗಿದ್ದರೆ, ಇಲ್ಲಿ ವಿಕ್ಟರಿ2 ಚಿತ್ರದ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಕಾಲೇಜ್‍ಕುಮಾರ ಖ್ಯಾತಿಯ ಸಂತು ನಿರ್ದೇಶನದ ಚಿತ್ರದ ಪ್ರಿಪ್ರೊಡಕ್ಷನ್ ಹಾಗೂ ಕಲಾವಿದ, ತಂತ್ರಜ್ಞರ ಆಯ್ಕೆ ಬಿರಸುಗೊಂಡಿದೆ. ಚಿತ್ರಕ್ಕೆ ನಾಯಕಿಯಾಗಿ ಅಪೂರ್ವ ಆಯ್ಕೆಯಾಗಿದ್ದಾರೆ.

ಯಾರು ಈ ಅಪೂರ್ವ ಎಂದರೆ ತಕ್ಷಣ ನೆನಪಾಗದೇ ಇರಬಹುದು. ಆದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ವಿಭಿನ್ನ ಪ್ರಯೋಗವಾಗಿದ್ದ ಅಪೂರ್ವ ಚಿತ್ರವನ್ನು ನೆನಪಿಸಿಕೊಂಡರೆ, ಈಕೆ ನೆನಪಾಗದೆ ಇರಲಾರಳು. ಅವರೀಗ ಶರಣ್‍ಗೆ ವಿಕ್ಟರಿ2ನಲ್ಲಿ ನಾಯಕಿ.

ವಿಕ್ಟರಿಯಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಕೂಡಾ ಚಿತ್ರದಲ್ಲಿರುತ್ತಾರೆ. ಆದರೆ, ಅವರು ವಿಕ್ಟರಿ ಹಾಗೂ ವಿಕ್ಟರಿ2ಗೆ ಕೊಂಡಿಯಾಗುತ್ತಾರೆ. ಚಿತ್ರದ ನಾಯಕಿ ಅಪೂರ್ವ ಅವರೇ ಎಂದಿದ್ದಾರೆ ಸಂತು. ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ತರುಣ್ ಶಿವಪ್ಪ. ರ್ಯಾಂಬೋ2ಗೆ ಕ್ರಿಯೇಟಿವ್ ಹೆಡ್ ಆಗಿದ್ದ ತರುಣ್ ಸುಧೀರ್, ಈ ಚಿತ್ರಕ್ಕೂ ಕ್ರಿಯೇಟಿವ್ ಹೆಡ್. ಹಾಗಾಗಿ ನಿರೀಕ್ಷೆಗಳು ಸಹಜವಾಗಿಯೇ ಮೌಂಟ್ ಎವರೆಸ್ಟ್‍ನಲ್ಲಿವೆ.

Mugilpete Shooting Pressmeet In Sakleshpura

Odeya Audio Launch Gallery