Print 
km veeresh kfcc election,

User Rating: 0 / 5

Star inactiveStar inactiveStar inactiveStar inactiveStar inactive
 
chitraloka veeresh to contest for treasurer post in kfcc elections
KM Veeresh

ಕೆ.ಎಂ. ವೀರೇಶ್, ಇವರ ಪೂರ್ತಿ ಹೆಸರು. ಆದರೆ, ಚಿತ್ರೋದ್ಯಮದಲ್ಲಿ ಬರೀ ವೀರೇಶ್ ಎಂದರೆ ಯಾರು ಎಂದು ಕೇಳುವವರೇ, ಚಿತ್ರಲೋಕ ವೀರೇಶ್ ಹೌದಾ.. ಗೊತ್ತುಬಿಡಿ ಅಂತಾರೆ. ವೀರೇಶ್ ಎಂಬ ಹೆಸರಿಗೆ ಚಿತ್ರಲೋಕ ಎಂಬ ಹೆಸರು ಹಾಗೇ ಅಂಟಿಕೊಂಡಿದೆ. ಈಗ ವೀರೇಶ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಫಿಲಂಚೇಂಬರ್‍ನ ಗೌರವ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ ವೀರೇಶ್.

ವೀರೇಶ್ ಅವರು ಮೂಲತಃ ಛಾಯಾಗ್ರಹಕ, ಪತ್ರಕರ್ತ. ಆದರೆ, ಚಿತ್ರೋದ್ಯಮದಲ್ಲಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ವೀರೇಶ್, ಈ ಮೊದಲು ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ 3 ವರ್ಷ, ನಿರ್ಮಾಪಕರ ವಲಯ ಸಮಿತಿ ಸದಸ್ಯರಾಗಿ 2 ವರ್ಷ ಕಾರ್ಯನಿರ್ವಹಿಸಿದ್ದಾರೆ. ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಈ ವರ್ಷ ಕಾರ್ಯನಿರ್ವಹಿಸಿರುವ ವೀರೇಶ್, ತಮ್ಮ ಎಲ್ಲ ಹುದ್ದೆಗಳಲ್ಲೂ ದಕ್ಷತೆಯ ಹೆಜ್ಜೆ ಗುರುತು ಮೂಡಿಸಿರುವವರು.

ವೀರೇಶ್ ನಿರ್ಮಾಣದ ಕಾಡಬೆಳದಿಂಗಳು ಚಿತ್ರಕ್ಕೆ ರಾಜ್ಯಪ್ರಶಸ್ತಿ ಸಿಕ್ಕಿತ್ತು. ಆ್ಯಕ್ಟರ್ ಚಿತ್ರ, ಹಲವು ರಾಷ್ಟ್ರೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಚಿತ್ರಲೋಕ ಡಾಟ್ ಕಾಮ್ ಮೂಲಕ ಪ್ರಕಟಿಸಿದ್ದ ಟಚ್ ಸ್ಕ್ರೀನ್ ಪುಸ್ತಕಕ್ಕೆ ಕೂಡಾ ಸರ್ಕಾರದ ಪ್ರಶಸ್ತಿ ಲಭಿಸಿತ್ತು. ಒಬ್ಬ ಪತ್ರಕರ್ತನಾಗಿ ಮಾಧ್ಯಮ ಅಕಾಡೆಮಿ ಗೌರವಕ್ಕೂ ಪಾತ್ರರಾಗಿರುವ ವೀರೇಶ್ ಅವರದ್ದು, ಎಲ್ಲ ಕ್ಷೇತ್ರಗಳಲ್ಲೂ ತಮ್ಮ ನೆನಪಿನ ಹೆಜ್ಜೆ ಉಳಿಸಿರುವ ವ್ಯಕ್ತಿ.

ಪ್ರೆಸ್‍ಕ್ಲಬ್‍ನಲ್ಲಿಯೂ ಎರಡು ಬಾರಿ ಖಜಾಂಚಿಯಾಗಿ, ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ವೀರೇಶ್, ಈ ಬಾರಿ ಮತ್ತೊಮ್ಮೆ ಚುನಾವಣೆಗಿಳಿದಿದ್ದಾರೆ. ಜೂನ್ 26ರಂದು ನಡೆಯಲಿರುವ ಚುನಾವಣೆಯಲ್ಲಿ ಖಜಾಂಚಿ ಹುದ್ದೆಗೆ ಸ್ಪರ್ಧಿಸಿರುವ ವೀರೇಶ್ ಅವರಿಗೆ ಶುಭವಾಗಲಿ.