ಕಿರಿಕ್ ಪಾರ್ಟಿ ನಂತರ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ದೊಡ್ಡ ದೊಡ್ಡ ಬ್ಯಾನರ್ ಮತ್ತು ನಿರ್ಮಾಪಕರನ್ನು ಬದಿಗಿಟ್ಟು ರಿಷಬ್ ಕೈಗೆತ್ತಿಕೊಂಡ ಸಿನಿಮಾ `ಸಹಿಪ್ರಾ ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ' ಅನ್ನೋ ಚಿತ್ರ. ಅದು ನನ್ನ ಮನಸ್ಸಿಗೆ ಹತ್ತಿರವಾದ ಕಥೆ. ಹೀಗಾಗಿ ಕಮರ್ಷಿಯಲ್ ಬಿಟ್ಟು ಇದೇ ಸಿನಿಮಾ ಆಯ್ಕೆ ಮಾಡಿಕೊಂಡೆ ಎಂದಿದ್ದ ರಿಷಬ್, ಇಡೀ ಚಿತ್ರವನ್ನು ತಮ್ಮ ತಂಡದ ಮೂಲಕವೇ ಕಟ್ಟಿಕೊಟ್ಟಿದ್ದಾರೆ. ರಿಷಬ್ ಟೀಂನ ಸದಸ್ಯರು ಸಂಭಾವನೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ.
ಸಿನಿಮಾ ಬಿಡುಗಡೆಗೆ ತಯಾರಾಗಿರುವ ರಿಷಬ್, ಚಿತ್ರವನ್ನು ಜಯಣ್ಣ ಫಿಲಂಸ್ ಮೂಲಕ ರಿಲೀಸ್ ಮಾಡಲಿದ್ದಾರೆ. ಸದ್ಯಕ್ಕೆ ಚಿತ್ರದ ದಡ್ಡ ಎಂಬ ಹಾಡನ್ನು ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡ ಶಾಲೆಗಳ ಬಗೆಗಿನ ಕಾಳಜಿಯೇ ಚಿತ್ರದ ಜೀವಾಳ. ಆದರೆ, ಸಂದೇಶವನ್ನು ಮನರಂಜನಾತ್ಮಕವಾಗಿ ಹೇಳುತ್ತಿದ್ದೇವೆ. ಯಾವುದೂ ಇಲ್ಲಿ ವಾಚ್ಯವಾಗಿಲ್ಲ ಎಂದು ಭರವಸೆ ಕೊಡುತ್ತಿದ್ದಾರೆ ರಿಷಬ್ ಶೆಟ್ಟಿ