` 40 ರಾತ್ರಿಗಳ ಕಥೆ ಹೇಳಿದ ಶುಭಾ ಪೂಂಜಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shubha punja sharesh her horror experiences
Shubha Punja Image

ಒಂದಲ್ಲ..ಎರಡಲ್ಲ.. 40 ರಾತ್ರಿಗಳು. ಒಂದೊಂದು ರಾತ್ರಿಯ ಕಥೆಯೂ ವಿಭಿನ್ನ. 40 ರಾತ್ರಿಗಳ ದಟ್ಟ ಅನುಭವವನ್ನು ಮರೆಯುವ ಹಾಗೆಯೇ ಇಲ್ಲ. ಸಂಜೆ 6 ಗಂಟೆಗೆ ಶುರುವಾದರೆ, ಎಲ್ಲ ಮುಗಿಯುತ್ತಿದ್ದುದು ಬೆಳಗ್ಗೆ 6 ಗಂಟೆಗೆ. ಅದು ಶಿವರಾತ್ರಿಯೂ ಹೌದು, ಶುಭರಾತ್ರಿಯೂ ಹೌದು. ಸತತ 40 ದಿನ. `ಕೆಲವು ದಿನಗಳ ನಂತರ' ಚಿತ್ರದ ಶೂಟಿಂಗ್ ಅನುಭವವನ್ನು ಹೀಗೆ ಬಿಚ್ಚಿಟ್ಟಿದ್ದಾರೆ ಶುಭಾ ಪೂಂಜಾ.

ಜಯಮಹಲ್ ನಂತರ, ಇದು ಅವರಿಗೆ ಎರಡನೇ ಹಾರರ್ ಸಿನಿಮಾ. ಶುಭಾ ಪೂಂಜಾ ಸಾಫ್ಟ್‍ವೇರ್ ಎಂಜಿನಿಯರ್ ಪಾತ್ರ ಮಾಡಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ದೇವರಾಯನ ದುರ್ಗದ ಕಾಡಿನಲ್ಲಿ ನಡೆದಿದೆ. ಚಿತ್ರದಲ್ಲಿ ಮಕ್ಕಳು, ಹೃದಯರೋಗಿಗಳು ಬೆಚ್ಚಿಬೀಳುವಂತ ದೃಶ್ಯಗಳಿವೆಯಂತೆ. ಯಾವುದಕ್ಕೂ ಹುಷಾರಾಗಿರಿ.

Padarasa Movie Gallery

Kumari 21 Movie Gallery