` ಸಾಮ್ರಾಟ್ ವಿಜಯ್ ಟೀಸರ್ ಬಂತು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
samrat vijay's kusthi teaser out
Samrat Viajy Image from Kusthi Teaser

ದುನಿಯಾ ವಿಜಯ್ ಅವರ ಮಗ ಸಾಮ್ರಾಟ್‍ರನ್ನು ತೆರೆಗೆ ತರಲು ಭಾರಿ ಪ್ರಯತ್ನ ನಡೆಸಿದ್ದಾರೆ. ತಮ್ಮ ಕುಸ್ತಿ ಚಿತ್ರದಲ್ಲಿ ಸಾಮ್ರಾಟ್‍ನನ್ನು ಮರಿ ಪೈಲ್ವಾನನಾಗಿ ಪರಿಚಯಿಸುತ್ತಿದ್ದಾರೆ. ಚಿತ್ರದ ಟೀಸರ್ ಕೂಡಾ ಇಂಟ್ರೆಸ್ಟಿಂಗ್.

ದೊಡ್ಡ ಹುಡುಗನೊಬ್ಬನ ಜೊತೆ ಕುಸ್ತಿ ಆಡುವ ಸಾಮ್ರಾಟ್ ಅವನನ್ನು ಸೋಲಿಸುತ್ತಾನೆ. ಅವನನ್ನು ಗುರುವೇ ಲೇವಡಿ ಮಾಡಿ, ಅಖಾಡ ಏನು ನಿಮ್ಮಪ್ಪಂದಲ್ಲ, ಮೆರೆಯಬೇಡ ಅಂತಾನೆ. ಅಪ್ಪನ ತಂಟೆಗೆ ಬರಬೇಡ, ನಿನ್ನಂತ ನೂರಾರು ಪೈಲ್ವಾನರಿಗೆ ನಮ್ಮಪ್ಪನೇ ಉಸ್ತಾದ್ ಎನ್ನುತ್ತಾನೆ. ಅಫ್‍ಕೋರ್ಸ್, ಅದು ಸಾಮ್ರಾಟ್ ಹುಟ್ಟುಹಬ್ಬವಷ್ಟೇ ಅಲ್ಲ, ಅಪ್ಪಂದಿರ ದಿನದ ಉಡುಗೊರೆಯೂ ಹೌದು.

ಟೀಸರ್ ಕುತೂಹಲ ಹುಟ್ಟಿಸಿದೆ. ಶಿವಮೊಗ್ಗ ರಾಘು ನಿರ್ದೇಶನದ ಚಿತ್ರಕ್ಕೆ ಸ್ವತಃ ದುನಿಯಾ ವಿಜಯ್ ನಿರ್ಮಾಪಕ.

Chemistry Of Kariyappa Movie Gallery

BellBottom Movie Gallery