ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ, ಈಗ ಗುಬ್ಬಿಯಾಗುತ್ತಿದ್ದಾರೆ. ಅವರ ಮೇಲೆ ಬ್ರಹ್ಮಾಸ್ತ್ರ ಬಿಡೋಕೆ ಸಜ್ಜಾಗಿರುವುದು ಸುಜಯ್ ಶಾಸ್ತ್ರಿ. ಅವರಿಗೂ ಇದು ಮೊದಲ ನಿರ್ದೇಶನ. ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಗಮನ ಸೆಳೆದಿದದ ಕವಿತಾ ಗೌಡ, ನಾಯಕಿ. ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬ ಚಿತ್ರ ತಂಡದ ಕಿರುಪರಿಚಯ.
ಇದು ಕಾರ್ಪೊರೇಟ್ ಜಗತ್ತಿನ ಕಥೆಯಂತೆ. ಬೆಂಗಳೂರಿನಲ್ಲಿ ಗುಬ್ಬಿಯಂತೆ ಬದುಕುತ್ತಿರುವ ನಾಯಕನಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ಎದುರಾಗುವ ಸವಾಲುಗಳು, ಅಡೆತಡೆಗಳು, ಸಮಸ್ಯೆಗಳನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಚಿತ್ರದಲ್ಲಿದೆ.
ಅಂದಹಾಗೆ ಚಿತ್ರದ ನಿರ್ಮಾಪಕ ಚಂದ್ರಶೇಖರ್. ಚಮಕ್ ಚಂದ್ರಶೇಖರ್. ಹೀಗಾಗಿ ಚಿತ್ರ ಅದ್ದೂರಿಯಾಗಿಯೇ ತೆರೆಗೆ ಬರಲಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ.