` ಕೃಷ್ಣನ್ ಮ್ಯಾರೇಜ್.. ನಿರ್ದೇಶಕರ ಜೊತೆ ವಿನೋದ್ ಪ್ರಭಾಕರ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
vinod prabhakar's new movie with nuthan umesh
Nuthan Umesh, Vinod Prabhakar Image

ವಿನೋದ್ ಪ್ರಭಾಕರ್ ಹೊಸ ಸಿನಿಮಾ ಸೆಟ್ಟೇರೋಕೆ ಸಿದ್ಧವಾಗಲಿದೆ. ಎಂದಿನಂತೆ ಇದು ಕೂಡಾ ಆ್ಯಕ್ಷನ್ ಸಿನಿಮಾ. ಕಟಿಗೇನಹಳ್ಳಿ ಸೋಮಶೇಖರ್ ನಿರ್ಮಾಣದ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ನೂತನ್ ಉಮೇಶ್. ಕೃಷ್ಣನ್ ಮ್ಯಾರೇಜ್ ಸ್ಟೋರಿ ಎಂಬ ಹಿಟ್ ಸಿನಿಮಾ ಕೊಟ್ಟಿದ್ದ ನೂತನ್ ಉಮೇಶ್, ದೀರ್ಘಕಾಲದ ನಂತರ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಹೀಗಾಗಿಯೇ ನಿರೀಕ್ಷೆಯೂ ಹೆಚ್ಚು.

ಜಬರ್‍ದಸ್ತ್ ಆ್ಯಕ್ಷನ್, ಸ್ಟಂಟ್, ಪ್ರೀತಿ, ಸೆಂಟಿಮೆಂಟ್.. ಎಲ್ಲವೂ ಇರುವ ಔಟ್ ಆಂಡ್ ಔಟ್ ಮಾಸ್ ಸಿನಿಮಾ ಇದಾಗಲಿದೆಯಂತೆ. ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲ ಹೊಣೆಯೂ ನೂತನ್ ಉಮೇಶ್ ಅವರದ್ದೇ. ಜುಲೈನಲ್ಲಿ ಚಿತ್ರೀಕರಣ ಶುರುವಾಗಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery