` ಡಾಲಿ ಧನಂಜಯ್.. ಇನ್ಮುಂದೆ ಭೈರವ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dolly dhananjay is now bhairava
Dhananjay Image

ಟಗರು ಚಿತ್ರದ ಡಾಲಿ ಪಾತ್ರದ ಮೂಲಕ, ಅದ್ಭುತ ಸಕ್ಸಸ್ ಪಡೆದುಕೊಂಡ ಧನಂಜಯ್, ವರ್ಮಾ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯಿತ್ತು. ಈಗದು ಪಕ್ಕಾ ಆಗಿದೆ. ರಾಮ್‍ಗೋಪಾಲ್ ವರ್ಮಾ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿರುವ ಭೈರವಗೀತ ಸಿನಿಮಾಗೆ ಡಾಲಿ ಧನಂಜಯ್ ನಾಯಕ. 

ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರಕ್ಕೆ, ವರ್ಮಾ ಅವರ ಅಸಿಸ್ಟೆಂಟ್ ಆಗಿದ್ದ ಸಿದ್ದು ಅಲಿಯಾಸ್ ಸಿದ್ಧಾರ್ಥ್ ನಿರ್ದೇಶನವಿದೆ. ಹೀಗಾಗಿ ತೆಲುಗಿನಲ್ಲೂ ಧನಂಜಯ್‍ಗೂ ಒಳ್ಳೆಯ ಓಪನಿಂಗ್ ಸಿಗುವ ಸಾಧ್ಯತೆಗಳಿವೆ. ಕನ್ನಡ ಭೈರವಗೀತ ಚಿತ್ರಕ್ಕೆ ಮಾಸ್ತಿ ಸಂಭಾಷಣೆಯಿದ್ದರೆ, ತೆಲುಗು ಭೈರವಗೀತಕ್ಕೆ ವಂಶಿ ಸಂಭಾಷಣೆಯಿದೆ. ಕೆಲವೇ ದಿನಗಳಲ್ಲಿ ಚಿತ್ರದ ಫಸ್ಟ್‍ಲುಕ್ ಬಿಡುಗಡೆಯಾಗುವ ನಿರೀಕ್ಷೆ ಇದೆ.

Matthe Udbhava Trailer Launch Gallery

Maya Bazaar Pressmeet Gallery