ಅಕ್ಷಯ್ ಕುಮಾರ್, ಸದ್ಯಕ್ಕೆ ಬಾಲಿವುಡ್‍ನ ಸೂಪರ್ ಸ್ಟಾರ್. ಸತತ ಹಿಟ್‍ಗಳನ್ನು ನೀಡುತ್ತಲೇ ಇರುವ ಅಕ್ಷಯ್, ಕಾಮಿಡಿ, ಆ್ಯಕ್ಷನ್, ಸಾಮಾಜಿಕ ಸಂದೇಶ ಸಾರುವ ಗಂಭೀರ ಚಿತ್ರಗಳು.. ಹೀಗೆ ಪ್ರತಿ ಚಿತ್ರದಲ್ಲೂ ವಿಭಿನ್ನತೆ ಕಾಯ್ದುಕೊಂಡು ಬರುತ್ತಿರುವ ನಟ. ಅವರು ಹೌಸ್‍ಫುಲ್ ಸಿರೀಸ್‍ನ ಮತ್ತೊಂದು ಕಾಮಿಡಿಗೆ ರೆಡಿಯಾಗುತ್ತಿದ್ದಾರೆ.
ಅಷ್ಟೇ ಆಗಿದ್ದರೆ ಅದು ಬಾಲಿವುಡ್ ಸುದ್ದಿಯಾಗುತ್ತಿತ್ತು. ಆದರೆ, ಹೌಸ್‍ಫುಲ್ 4ಗೆ ನಾಯಕಿಯಾಗಿ ಆಯ್ಕೆಯಾಗಿರೋದು ಕೃತಿ ಕರಬಂದ. ಕೃತಿ, ಮೂಲತಃ ಕನ್ನಡತಿಯಲ್ಲದೇ ಹೋದರೂ, ಗುರುತಿಸಿಕೊಂಡಿದ್ದು ಕನ್ನಡ ಚಿತ್ರಗಳ ಮೂಲಕ. ಚಿರಂಜೀವಿ ಸರ್ಜಾ ಅವರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಕೃತಿ ಕರಬಂದ, ದೊಡ್ಡ ಹೆಸರು ಮಾಡಿದ್ದು ಗೂಗ್ಲಿ ಚಿತ್ರದಲ್ಲಿ. ಕನ್ನಡದಲ್ಲಿ ಯಶ್, ಶಿವರಾಜ್‍ಕುಮಾರ್, ಜೋಗಿ ಪ್ರೇಮ್, ನೆನಪಿರಲಿ ಪ್ರೇಮ್, ಚಿರಂಜೀವಿ ಸರ್ಜಾ ಮೊದಲಾದವರ ಜೊತೆ ನಟಿಸಿರುವ ಕೃತಿ ಕರಬಂದ, ತಮಿಳು, ತೆಲುಗಿನಲ್ಲೂ ಹೆಸರು ಮಾಡಿರುವ ನಟಿ.
ಹಿಂದಿಯಲ್ಲಿ ಈಗಾಗಲೇ ಇಮ್ರಾಜ್ ಹಶ್ಮಿ ಜೊತೆ ನಟಿಸಿರುವ ಕೃತಿ, ಈಗ ಅಕ್ಷಯ್ ಚಿತ್ರದಲ್ಲಿ ನಟಿಸೋಕೆ ಆಯ್ಕೆಯಾಗಿದ್ದಾರೆ. ಆ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ರಿತೇಶ್ ದೇಶ್‍ಮುಖ್, ಬಾಬಿ ಡಿಯೋಕ್ ಕೂಡಾ ಇದ್ದಾರೆ. ಇವರೆಲ್ಲರಲ್ಲಿ ಕೃತಿ ಯಾರಿಗೆ ನಾಯಕಿ..? ಅದು ಸಸ್ಪೆನ್ಸ್.