` ದರ್ಶನ್‍ಗೆ ಅಮೂಲ್ಯ ತಂಗಿ..! - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
amulya will be sister to darshan
Amulya To Act As Sister To Darshan

ಅಮೂಲ್ಯ ಕನ್ನಡ ಚಿತ್ರರಂಗಕ್ಕೆ ಕಮ್‍ಬ್ಯಾಕ್ ಮಾಡಲಿದ್ದಾರೆ ಅನ್ನೋ ಸುದ್ದಿ ಈಗ ಅಧಿಕೃತವಾಗಿದೆ. ಅಮೂಲ್ಯ ತಮ್ಮ ಕಮ್‍ಬ್ಯಾಕ್‍ಗೆ ಆಯ್ಕೆ ಮಾಡಿಕೊಂಡಿರೋದು ದರ್ಶನ್ ಚಿತ್ರವನ್ನ. ದರ್ಶನ್ ತಮಿಳಿನ ವೇದಾಳಂ ಚಿತ್ರದ ರೀಮೇಕ್‍ನಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಅಮೂಲ್ಯ, ದರ್ಶನ್ ತಂಗಿಯ ಪಾತ್ರ ಮಾಡಲಿದ್ದಾರೆ.

ವೇದಾಳಂ, ತಮಿಳಿನಲ್ಲಿ ಸೂಪರ್ ಹಿಟ್ ಸಿನಿಮಾ. ಅಜಿತ್ ಅಭಿನಯದ ಚಿತ್ರದಲ್ಲಿ ಹೀರೋಯಿನ್‍ಗಿಂತಲೂ ಅತಿ ಹೆಚ್ಚು ಪ್ರಾಮುಖ್ಯತೆ ಇರೋದು ತಂಗಿಯ ಪಾತ್ರಕ್ಕೆ. ತಮಿಳಿನಲ್ಲಿ ಲಕ್ಷ್ಮಿ ಮೆನನ್ ಮಾಡಿದ್ದ ಪಾತ್ರವನ್ನು, ಕನ್ನಡದಲ್ಲಿ ಅಮೂಲ್ಯ ನಿರ್ವಹಿಸಲಿದ್ದಾರೆ. ದರ್ಶನ್ ಇಮೇಜ್‍ಗೆ ಹೇಳಿ ಮಾಡಿಸಿದಂತಿರುವ ಚಿತ್ರದ ಇನ್ನಷ್ಟು ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.

Related Articles :-

ದರ್ಶನ್‍ಗೆ ಅಮೂಲ್ಯ ನಾಯಕಿ..?