ಅಮ್ಮ ಐ ಲವ್ ಯೂ.. ಮುಂದಿನ ವಾರ ರಿಲೀಸ್ ಆಗುತ್ತಿರುವ ಈ ಚಿತ್ರದಲ್ಲಿ ಹೀರೋ ಚಿರಂಜೀವಿ ಸರ್ಜಾ. ನಾಯಕಿ ನಿಶ್ವಿಕಾ ನಾಯ್ಡು. ತಾಯಿಯ ಪಾತ್ರದಲ್ಲಿ ನಟಿಸಿರೋದು ನಿಶ್ವಿಕಾ ನಾಯ್ಡು. ಚಿತ್ರದಲ್ಲಿ ನಿಶ್ವಿಕಾ ಅವರದ್ದು ಬೋಲ್ಡ್ & ಬ್ಯೂಟಿಫುಲ್ ಪಾತ್ರ.
ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದಲ್ಲಿ ನಟಿಸುತ್ತಿರುವಾಗಲೇ ಅಮ್ಮ ಐ ಲವ್ ಯು ಚಿತ್ರದ ಅಡಿಷನ್‍ಗೆ ಹೋಗಿದ್ದರಂತೆ ನಿಶ್ವಿಕಾ. ಆಯ್ಕೆಯಾಗುವವರೆಗೆ ಪಾತ್ರದ ಬಗ್ಗೆ ಗೊತ್ತಿರಲಿಲ್ಲ. ನನ್ನ ವೃತ್ತಿ ಜೀವನಕ್ಕೆ ಅಮ್ಮ ಐ ಲವ್ ಯು ಒಳ್ಳೆಯ ಓಪನಿಂಗ್ ಎಂದಿದ್ದಾರೆ ನಿಶ್ವಿಕಾ.
ತಾಯಿ, ಮಗನ ಬಾಂಧವ್ಯವೇ ಪ್ರಧಾನವಾಗಿರುವ ಚಿತ್ರದಲ್ಲಿ ನಾಯಕಿಗೂ ಒಳ್ಳೆಯ ಪಾತ್ರವಿದೆ. ಚೈತನ್ಯ ನಿರ್ದೇಶನದ ಸಿನಿಮಾಗೆ ಯೋಗಿ ದ್ವಾರಕೀಶ್ ನಿರ್ಮಾಪಕ.