ದೂದ್‍ಪೇಡ ದಿಗಂತ್ ಮತ್ತು ಐಂದ್ರಿತಾ ತಮ್ಮ ಪ್ರೀತಿಯನ್ನು ಈಗ ಗುಟ್ಟಾಗೇನೂ ಇಟ್ಟಿಲ್ಲ. ತಾವಿಬ್ಬರೂ ಜನುಮದ ಜೋಡಿ ಅನ್ನೋದನ್ನ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಹಲವು ವರ್ಷಗಳಿಂದ ಲವ್ ಮಾಡ್ತಾನೇ ಇರೋ ಈ ಜೋಡಿ, ಈ ವರ್ಷದ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆಯಂತೆ.
ಇಬ್ಬರೂ ಮಾತನಾಡಿಕೊಂಡಿದ್ದೇವೆ. ಡಿಸೆಂಬರ್‍ನಲ್ಲಿ ಮದುವೆಯಾಗೋ ಆಲೋಚನೆ ಇದೆ. ದಿನಾಂಕ, ಸ್ಥಳ ಎಲ್ಲ ಫಿಕ್ಸ್ ಆದ ಮೇಲೆ ನಾನೇ ಅಧಿಕೃತವಾಗಿ ಹೇಳ್ತೇನೆ ಎಂದಿದ್ದಾರೆ ದಿಗಂತ್.
ಮನೆಯಲ್ಲಿನ್ನೂ ಮದುವೆಯ ಬಗ್ಗೆ ಚರ್ಚೆ ಮಾಡಿಲ್ಲ. ಅವರ ಒಪ್ಪಿಗೆ ತೆಗೆದುಕೊಂಡೇ ಮುನ್ನಡೆಯುತ್ತೇವೆ. ಡಿಸೆಂಬರ್ ನಂತರ ದಿಗಂತ್ ಜೀವನದಲ್ಲಿ ಹೊಸ ಕಥೆ ಶುರುವಾಗಲಿದೆ ಎಂದಿದ್ದಾರೆ ದಿಗಂತ್.
ಅಫ್‍ಕೋರ್ಸ್, ಸದ್ಯಕ್ಕೆ ದಿಗಂತ್ `ಕಥೆಯೊಂದು ಶುರುವಾಗಿದೆ' ಚಿತ್ರದ ಹೀರೋ. ಆ ಚಿತ್ರದ ನಿರ್ಮಾಪಕರು ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ. ಪರಂವಾ ಸ್ಟುಡಿಯೋಸ್‍ನಿಂದ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಸನ್ನಾ ಹೆಗಡೆ ನಿರ್ದೇಶನವಿದೆ.