` ಕಾರು ಅಪಘಾತ - ಪುನೀತ್ ರಾಜ್‍ಕುಮಾರ್ ಸೇಫ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
puneeth escapes from an car accident
Puneeth Rajkumar escapes a car accident

ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕಾರು ಅನಂತಪುರಂ ಬಳಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಪುನೀತ್ ಸೇರಿದಂತೆ ಕಾರ್‍ನಲ್ಲಿದ್ದ ಯಾರಿಗೂ ಅಪಾಯವಾಗಿಲ್ಲ. ಕಾರ್‍ನಲ್ಲಿದ್ದ ಒಬ್ಬರ ಮೂಗಿಗೆ  ಗಾಯವಾಗಿದೆ. ಅದರ ಹೊರತಾಗಿ ಎಲ್ಲರೂ ಸೇಫ್. 

ರಾತ್ರಿ ಸುಮಾರು 9.30ರ ವೇಳೆಯಲ್ಲಿ ನಟಸಾರ್ವಭೌಮ ಶೂಟಿಂಗ್ ಮುಗಿಸಿಕೊಂಡು ಬಳ್ಳಾರಿ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದಾಗ, ರಸ್ತೆಯಲ್ಲಿದ್ದ ಗುಂಡಿಯೊಂದಕ್ಕೆ ಕಾರು ಇಳಿದಿದೆ. ಗುಂಡಿಗಿಳಿದ ರಭಸಕ್ಕೆ ರೇಂಜ್ ರೋವರ್ ಕಾರ್‍ನ ಟೈರ್ ಓಪನ್ ಆಗಿದೆ. ಹೀಗಾಗಿ ಚಾಲಕನ ಹತೋಟಿ ತಪ್ಪಿದೆ. ರಸ್ತೆ ಡಿವೈಡರ್‍ಗೆ ಗುದ್ದಿದೆ. ತಕ್ಷಣವೇ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಪುನೀತ್ ರಾಜ್‍ಕುಮಾರ್‍ರನ್ನು ನೋಡಿ ಗುರುತು ಹಿಡಿದ ತೆಲುಗಿನವರು ಕೂಡಾ ನೆರವಿಗೆ ಧಾವಿಸಿ ಬಂದಿದ್ದಾರೆ. ತಕ್ಷಣವೇ ಬೇರೆ ವಾಹನದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ರಾತ್ರಿಯೇ ಪುನೀತ್ ಸದಾಶಿವನಗರದ ಮನೆಗೆ ವಾಪಸ್ ಆಗಿದ್ದಾರೆ.

ಯಾರೂ ಆತಂಕಪಡುವ ಅಗತ್ಯವಿಲ್ಲ. ನಮಗೆ ಯಾವುದೇ ಅಪಾಯವಾಗಿಲ್ಲ. ಅಪಘಾತವಾದಾಗ ಅಲ್ಲಿಯೇ ಇದ್ದ ತೆಲುಗಿನವರು ಹಾಗೂ ಕನ್ನಡದವರು ಎಲ್ಲರೂ ಸಹಾಯ ಮಾಡಿದರು. ಒಳ್ಳೆಯವರು ಎಲ್ಲ ಕಡೆ ಇರ್ತಾರೆ. ಆತಂಕ ಬೇಡ ಎಂದು ಹೇಳಿದ್ದಾರೆ ಪುನೀತ್ ರಾಜ್‍ಕುಮಾರ್.

ಅಪಘಾತದ ವೇಳೆ ಸ್ಪಂದಿಸಿದ, ಕಾಳಜಿ ತೋರಿಸಿದ ಪ್ರತಿಯೊಬ್ಬರಿಗೂ ನಾನು ಋಣಿ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ ಪುನೀತ್.