` ಸಿನಿಮಾಗೆ ರೆಡಿಯಾಗುತ್ತಿದ್ದಾರಂತೆ ಅಮೂಲ್ಯ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
amulya gearing up to re enter films
Amulya Image

ಚೆಲುವಿನ ಚಿತ್ತಾರದ ಐಶೂ.. ಚಿತ್ರರಂಗಕ್ಕೆ ಮತ್ತೊಮ್ಮೆ ಕಮ್‍ಬ್ಯಾಕ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಮದುವೆ, ಎಲೆಕ್ಷನ್‍ನಲ್ಲಿ ಬ್ಯುಸಿಯಾಗಿದ್ದ ಅಮೂಲ್ಯ, ಈಗ ಫಿಟ್‍ನೆಸ್‍ನತ್ತ ಗಮನ ಹರಿಸಿದ್ದಾರಂತೆ. ಎಲೆಕ್ಷನ್ ಕ್ಯಾಂಪೇನ್ ವೇಳೆ ಸಿಕ್ಕಿದ್ದನ್ನು ತಿನ್ನುತ್ತಿದ್ದೆ. ಫಿಟ್‍ನೆಸ್ ಕಡೆ ಗಮನ ಹರಿಸೋಕೆ ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಮತ್ತೊಮ್ಮೆ ಫಿಟ್‍ನೆಸ್‍ನತ್ತ ಗಮನ ಹರಿಸುತ್ತಿದ್ದೇನೆ ಎಂದಿದ್ದಾರೆ ಅಮೂಲ್ಯ.

ಅಮೂಲ್ಯ ಅವರ ಸಿನಿಮಾ ರೀ ಎಂಟ್ರಿಗೆ ಪತಿ ಜಗದೀಶ್ ಅವರ ಬೆಂಬಲವೂ ಇದೆ. ಈಗಾಗಲೇ ಎರಡು ಕಥೆ ಕೇಳಿದ್ದಾರಂತೆ ಅಮೂಲ್ಯ. ತಮಿಳಿನಲ್ಲಿ ನಯನತಾರಾ ಆಯ್ಕೆ ಮಾಡಿಕೊಳ್ಳುವ ಕಥೆಗಳಂತಿದೆ ಎಂದು ಹೇಳಿಕೊಂಡಿದ್ದಾರೆ ಅಮೂಲ್ಯ.