ಆ ಕರಾಳ ರಾತ್ರಿ.. ದಯಾಳ್ ಪದ್ಮನಾಭನ್ ನಿರ್ದೇಶನದ ಸಿನಿಮಾ. ಸಖಸಖಿ, ಆ್ಯಕ್ಟರ್ ಮೊದಲಾದ ವಿಭಿನ್ನ ಸಿನಿಮಾಗಳ ಮೂಲಕ ಹೆಸರಾಗಿರುವ ದಯಾಳ್ ಪದ್ಮನಾಭ್, ಈಗ ಆ ಕರಾಳ ರಾತ್ರಿ ಸಿನಿಮಾ ಮಾಡಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆ ಮಾಡಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದಲ್ಲಿ ದಯಾಳ್, ಗುರು ಶಿಷ್ಯರ ನಡುವೆ ಮಿನುಗಿದ್ದು ವಿಶೇಷ.
ದಯಾಳ್ ಅವರ ಗುರು ಬೇರ್ಯೂರೂ ಅಲ್ಲ, ರಿಯಲ್ ಸ್ಟಾರ್ ಉಪೇಂದ್ರ. ಉಪೇಂದ್ರ ಅವರ ಜೊತೆ ಹೆಚ್2ಒನಲ್ಲಿ ಕೆಲಸ ಮಾಡುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ದಯಾಳ್. ಇನ್ನು ನಿರ್ದೇಶಕ ಆರ್.ಚಂದ್ರು, ದಯಾಳ್ ಅವರ ಶಿಷ್ಯ. ದಯಾಳ್ ಅವರ ಸಖಸಖಿ ಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದವರು.
ಹೀಗೆ ಗುರು ಮತ್ತು ಶಿಷ್ಯರ ಪ್ರೀತಿಯ ನಡುವೆ ತಮ್ಮ ಆ ಕರಾಳ ರಾತ್ರಿಯ ಹಾಡು ಬಿಡುಗಡೆ ಸಂಭ್ರಮಿಸಿದರು ದಯಾಳ್