ಟಗರು ಚಿತ್ರ 100 ದಿನ ಪೂರೈಸಿ ಮುನ್ನುಗ್ಗುತ್ತಿರುವಾಗಲೇ ನಿರ್ದೇಶಕ ಸೂರಿ, ಟಗರು 2 ಕನಸು ಬಿಚ್ಚಿಟ್ಟಿದ್ದಾರೆ. ಟಗರು ಚಿತ್ರದ ವೇಳೆಯಲ್ಲಿಯೇ ಟಗರು 2 ಚಿತ್ರದ ಸುದ್ದಿ ಹೊರಬಿದ್ದಿದೆಯಾದರೂ, ಚಿತ್ರದ ಕಥೆಯೇ ಇನ್ನೂ ಫೈನಲ್ ಆಗಿಲ್ಲ. ಆದರೆ, ಸೂರಿ ತಲೆಯಲ್ಲಿ ಟಗರು 2ನಲ್ಲಿ ಶಿವರಾಜ್ ಕುಮಾರ್ ಮತ್ತು ಪುನೀತ್ ಇಬ್ಬರನ್ನೂ ಸೇರಿಸಿದರೆ ಹೇಗೆ ಅನ್ನೋ ಐಡಿಯಾ ಬಂದಿದೆಯಂತೆ.
ನಮ್ಮ ಬಳಿ ಈಗಾಗಲೇ ಒಂದು ಟಗರು ಇದೆ. ಇನ್ನೊಂದು ಟಗರನ್ನು ನಿಲ್ಲಿಸಿದರೆ, ಖಂಡಿತಾ ಅದು ದೊಡ್ಡ ಸಿನಿಮಾ ಆಗಲಿದೆ. ಸಹೋದರರಿಗೆ ಸಿನಿಮಾ ಮಾಡುವಾಗ ಎಲ್ಲವನ್ನೂ ತಲೆಯಲ್ಲಿಟ್ಟುಕೊಂಡು ಸಿನಿಮಾ ಮಾಡಬೇಕು. ಇಬ್ಬರ ಅಭಿಮಾನಿ ಬಳಗವೂ ದೊಡ್ಡದು. ಇಬ್ಬರೂ ಒಳ್ಳೆ ಡ್ಯಾನ್ಸರ್‍ಗಳು. ಇದೆಲ್ಲವನ್ನೂ ತಲೆಯಲ್ಲಿಟ್ಟುಕೊಂಡು ಸ್ಕ್ರಿಪ್ಟ್ ಮಾಡಬೇಕು ಎಂದಿದ್ದಾರೆ ಸೂರಿ.
ಪುನೀತ ಜೊತೆ ಕೆಲವು ಬಾರಿ ಮಾತನಾಡಿದ್ದೇನೆ. ಆದರೆ ಇನ್ನೂ ಯಾವುದೂ ಫೈನಲ್ ಆಗಿಲ್ಲ. ಕಥೆ ಇಬ್ಬರಿಗೂ ಇಷ್ಟವಾಗಬೇಕು ಎಂದಿದ್ದಾರೆ ಸೂರಿ. ಅಭಿಮಾನಿಗಳು ಆಗಲೇ ಗುಟುರು ಹಾಕಿ ಕಾಯ್ತಾವ್ರೆ.