` ಪುಟ್ಟ ಮಕ್ಕಳಿಗೆ ಯಶ್ ಹೇಳಿದ ಕಥೆಗಳು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yash shares moral stories to kids
Yash Image

ಮಗುವೊಂದು ತಾಯಿಯ ಬಳಿ `ನನಗೆ ಕಪ್ಪು ಬಣ್ಣದ ಬಲೂನ್ ಬೇಡ, ಕೆಂಪು ಬಣ್ಣದ್ದೇ ಬೇಕು' ಎಂದು ಹಠ ಹಿಡಿದಿತ್ತು. ಯಾಕೆ ಎಂದು ಕೇಳಿದಾಗ, ಕಪ್ಪು ಬಣ್ಣದ ಬಲೂನ್ ಮೇಲೆ ಹೋಗಲ್ಲ ಎಂದು ಹೇಳಿತಂತೆ ಮಗು. ಆಗ ತಾಯಿ, `ಬಣ್ಣದಿಂದ ಯಾವುದೂ ಮೇಲೆ ಹೋಗಲ್ಲ. ಬದಲಿಗೆ ಬಲೂನ್ ಒಳಗಿನ ಗಾಳಿ ಮೊದಲಾದ ಅಂಶಗಳಿಂದ ಮೇಲೆ ಹೋಗುತ್ತೆ' ಎಂದು ಹೇಳಿದಳು.

ಇದು ಯಶ್ ಮಕ್ಕಳಿಗೆ ಹೇಳಿದ ಕಥೆ. ಮಕ್ಕಳನ್ನು ಬಣ್ಣದ ಆದಾರದ ಮೇಲೆ ನೋಡಬಾರದು, ಬಣ್ಣ ಮೇಲ್ನೋಟಕ್ಕೆ ಮಾತ್ರ ಎಂದು ಮಕ್ಕಳಿಗೆ ಯಶ್ ಹೇಳಿರುವ ಕಥೆ.

ಆರ್‍ಪಿಸಿ ಲೇಔಟ್‍ನ ಕೇಂಬ್ರಿಡ್ಜಸ್ ಸ್ಕೂಲ್‍ನಲ್ಲಿ ನಡೆದ ನಿರ್ಮಲ ಅನ್ನೋ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ಅದೇ ವೇಳೆ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತರು. ಇದೇ ವೇಳೆ ಮಕ್ಕಳಿಗೆ ಹಲವು ಬುದ್ದಿ ಮಾತುಗಳನ್ನೂ ಹೇಳಿದರು.

ತಾಯಿಗೆ ಮನೆಗೆಲಸದಲ್ಲಿ ಸಹಾಯ ಮಾಡಿ, ನಿಮ್ಮ ಊಟದ ತಟ್ಟೆಯನ್ನು ನೀವೇ ತೊಳೆಯಿರಿ. ನಿಮ್ಮ ಬಟ್ಟೆ ನೀವೇ ಒಗೆದುಕೊಳ್ಳಿ ಎಂದೆಲ್ಲ ಹೇಳಿದ ಯಶ್, ನಿಮ್ಮ ಧರ್ಮದ ಬಗ್ಗೆ ಗೌರವ ಇರಲಿ. ಆದರೆ, ಜಾತಿ, ಧರ್ಮ ಮನೆಗಷ್ಟೇ ಸೀಮಿತವಾಗಿರಲಿ. ತಲೆಯಲ್ಲಿನ ಜಾತಿಯನ್ನು ಕಿತ್ತು ಹಾಕಿ, ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡರೆ, ದೇಶದ ಪ್ರಗತಿ ಸಾಧ್ಯ ಎಂಬ ಕಿವಿಮಾತನ್ನೂ ಹೇಳಿದರು ಯಶ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery