` ಅಭಿಮಾನಿಯ ಆಸೆ ಪೂರೈಸಿದ ಮಾಣಿಕ್ಯ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep fulfills his fan's dream
Sudeep with his fan Abhishek

ಕಿಚ್ಚ ಸುದೀಪ್, ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ಕಲಾವಿದ. ಸೋಷಿಯಲ್ ಮೀಡಿಯಾ ಮೂಲಕ ನೇರವಾಗಿ, ನಿರಂತರವಾಗಿ ಅಭಿಮಾನಿಗಳ ಜೊತೆಯಲ್ಲಿರುವ ಸುದೀಪ್, ತಮ್ಮ ಅಭಿಮಾನಿಗಳನ್ನು ಆತ್ಮೀಯವಾಗಿ ನೋಡಿಕೊಳ್ಳುತ್ತಾರೆ. 

ಅಭಿಷೇಕ್ ಎಂಬ ಈ ಪುಟ್ಟ ಬಾಲಕ ಮಾಂಸಖಂಡ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ಸುದೀಪ್ ಅವರ ಅಭಿಮಾನಿ. ಈ ಅಭಿಮಾನಿಗೆ ಸುದೀಪ್ ಅವರನ್ನು ನೋಡಬೇಕು ಎನ್ನುವ ಹಂಬಲ. ವಿಷಯ ತಿಳಿದ ಸುದೀಪ್, ಅಭಿಷೇಕ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ.

ಧೈರ್ಯವಾಗಿರಿ, ಸರಿ ಹೋಗುತ್ತೆ ಎಂದು ನೈತಿಕ ಸ್ಥೈರ್ಯ ತುಂಬಿದ್ದಾರೆ. ಪುಟ್ಟ ಅಭಿಮಾನಿಯ ಬಯಕೆ ಈಡೇರಿಸಿದ್ದಾರೆ. ಕಿಚ್ಚನ ಅಭಿಮಾನಿಗಳಂತೂ ಸುದೀಪ್ ಅವರ ಈ ಹೃದಯವಂತಿಕೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

Kurukshetra Celebrity Show Gallery

Rightbanner02_gimmick_inside

Nanna Prakara Movie Images