` ಕಿರಿಕ್ ಸಂಯುಕ್ತಾ ಹಾಟ್ ಫೋಟೋ ವೈರಲ್ - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
samyuktha hegde's hot photo shoot viral
Samyuktha Hegde Image

ಕಿರಿಕ್ ಪಾರ್ಟಿಯಿಂದ ಬೆಳಕಿಗೆ ಬಂದ ಪ್ರತಿಭೆ ಸಂಯುಕ್ತಾ ಹೆಗ್ಡೆ. ಫ್ರೆಶ್‍ನೆಸ್ ಲುಕ್, ಅದ್ಭುತ ಎನ್ನಿಸಬಲ್ಲ ಡ್ಯಾನ್ಸ್, ನಟನೆಯೂ ಗೊತ್ತಿದ್ದ ಸಂಯುಕ್ತಾ, ಆನಂತರ ಸುದ್ದಿಯಾಗಿದ್ದು ವಿವಾದಗಳ ಮೂಲಕ. ತೆಲುಗಿನ ಕಿರಿಕ್ ಪಾರ್ಟಿ ರೀಮೇಕ್‍ನಲ್ಲೂ ನಟಿಸಿದ್ದ ಸಂಯುಕ್ತ, ಕನ್ನಡದಲ್ಲಿ ನಟಿಸಿದ್ದು ಕಾಲೇಜ್‍ಕುಮಾರ್ ಚಿತ್ರದಲ್ಲಿ. ಆ ಚಿತ್ರದಲ್ಲೂ ಅಷ್ಟೆ.. ವಿವಾದಗಳ ಮೂಲಕವೇ ಸದ್ದು ಮಾಡಿದ ಸಂಯುಕ್ತಾ, ಬಿಗ್‍ಬಾಸ್‍ಗೆ ಹೋಗಿ ಅಲ್ಲಿಯೂ ವಿವಾದವನ್ನು ಮೈಮೇಲೆಳೆದುಕೊಂಡರು. ಹೀಗಾಗಿ ಟ್ರೋಲ್ ಹೈಕ್ಳ ಟಾರ್ಗೆಟ್ ಆಗಿದ್ದ ಸಂಯುಕ್ತಾ ಹೆಗ್ಡೆ, ಈಗ ಮತ್ತೊಮ್ಮೆ ತಮ್ಮ ಬೋಲ್ಡ್‍ನೆಸ್‍ನಿಂದ ಟ್ರೋಲ್ ಆಗುತ್ತಿದ್ದಾರೆ.

ಇತ್ತೀಚೆಗೆ ಸಂಯುಕ್ತಾ ಹೆಗ್ಡೆ ಒಂದು ಫೋಟೋಶೂಟ್ ಮಾಡಿಸಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಆಗಿರುವ ಆ ಫೋಟೋಗಳು ರಸಿಕರ ಕಂಗಳು ಸೆಳೆಯುತ್ತಿರುವುದು ನಿಜ. ಸಂಯುಕ್ತಾ ಇಷ್ಟು ಬೋಲ್ಡಾ ಎಂದು ಹುಬ್ಬೇರಿಸುವಂತೆ ಮಾಡಿರುವುದೂ ನಿಜ. ಆದರೆ, ಈ ಫೋಟೋಗಳು ಈಗ ಟ್ರೋಲ್ ಆಗುತ್ತಿವೆ. 

ಸದ್ಯಕ್ಕೆ ತುರ್ತು ನಿರ್ಗಮನ ಎಂಬ ಸಿನಿಮಾ ಬಿಟ್ಟರೆ, ಸಂಯುಕ್ತಾ ಕೈಲಿ ಹೆಚ್ಚು ಸಿನಿಮಾ ಇಲ್ಲ. ಆದರೆ, ಸಿನಿಮಾ ಹೊರತಾಗಿ ಡ್ಯಾನ್ಸ್, ಸಾಹಸ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಸಂಯುಕ್ತಾ, ಟ್ರೋಲ್ ಹುಡುಗರ ಡಾರ್ಲಿಂಗ್ ಆಗಿರುವುದಂತೂ ಸತ್ಯ.

Padarasa Movie Gallery

Kumari 21 Movie Gallery