ನಿರ್ಮಾಪಕರ ಸಂಘದ ಅಧ್ಯಕ್ಷರೂ ಆಗಿರುವ ಮುನಿರತ್ನ, ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ದಿಗ್ವಿಜಯವನ್ನೇ ಸಾಧಿಸಿದ್ದಾರೆ. ಹಲವು ಆರೋಪಗಳನ್ನು ಎದುರಿಸಿದರೂ, ಮತದಾರರ ಆಶೀರ್ವಾದ ಪಡೆದು ಗೆದ್ದಿರುವ ಮುನಿರತ್ನ ಅವರಿಗೆ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಇದು 2ನೇ ಗೆಲುವು. ಶಾಸಕ ಮುನಿರತ್ನ ಅವರಿಗೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಅಭಿನಂದನೆ ಸಲ್ಲಿಸಿದೆ.
ಕನ್ನಡ ಚಿತ್ರರಂಗ ಈ ಬಾರಿ ಸಂಭ್ರಮದಲ್ಲಿದೆ. ಕಾರಣ, ಮೂಲತಃ ಚಿತ್ರೋದ್ಯಮಿಯಾಗಿರುವ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಕುಮಾರಸ್ವಾಮಿ ಹೊರತುಪಡಿಸಿದರೆ, ಚಿತ್ರರಂಗದಿಂದ ಈ ಚುನಾವಣೆಯಲ್ಲಿ ವಿಧಾನಸೌಧ ತಲುಪಿದ ಮತ್ತೊಬ್ಬ ಪ್ರಮುಖರು ಮುನಿರತ್ನ.