` ಕುರುಕ್ಷೇತ್ರಕ್ಕೆ ಎಷ್ಟು ಜನ ನಿರ್ದೇಶಕರು..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
how many directors for kurukahetra
Kurukshetra Movie Image

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ. ಕನ್ನಡದಲ್ಲಿ ಬಹುವರ್ಷಗಳ ಅದ್ಧೂರಿಯಾಗಿ ಸಿದ್ಧವಾಗಿರುವ ಪೌರಾಣಿಕ ಸಿನಿಮಾ. ಅಂಬರೀಷ್, ರವಿಚಂದ್ರನ್ ಸೇರಿದಂತೆ ಕನ್ನಡದ ಅರ್ಧಕ್ಕದ್ದ ಚಿತ್ರರಂಗವೇ ಒಂದಾಗಿರುವ ಸಿನಿಮಾ. ಮುನಿರತ್ನ ನಿರ್ಮಾಣದ.. ನಾಗಣ್ಣ ನಿರ್ದೇಶನದ ಸಿನಿಮಾ. ಆದರೆ, ಚಿತ್ರಕ್ಕೆ ನಾಗಣ್ಣ ಒಬ್ಬರೇ ನಿರ್ದೇಶಕರಲ್ಲ..

ಚಿತ್ರದ ಗ್ರಾಫಿಕ್ಸ್ ಹೊಣೆ ಹೊತ್ತಿರುವ ಹೈದರಾಬಾದ್‍ನ ಎಸ್.ವಿ.ಪ್ರಸಾದ್, ಚಿತ್ರಕ್ಕೆ ಸಂಭಾಷಣೆ ಬರೆದ ನಾಗೇಂದ್ರ ಪ್ರಸಾದ್, ಚಿತ್ರಕ್ಕೆ ಸಹ ನಿರ್ದೇಶಕರಾಗಿದ್ದ ದೇವರಾಜ್ ಪಲಾನ್ ಕೂಡಾ ಚಿತ್ರದ ನಿರ್ದೇಶಕರಂತೆ. ನಾಲ್ವರಿಗೂ ಚಿತ್ರದ ನಿರ್ದೇಶಕರ ಕ್ರೆಡಿಟ್ ನೀಡಲು ತೀರ್ಮಾನಿಸಲಾಗಿದೆಯಂತೆ.

ಒಂದು ಕಡೆ ಶೂಟಿಂಗ್, ಇನ್ನೊಂದು ಕಡೆ ಡಬ್ಬಿಂಗ್, ಮತ್ತೊಂದು ಎಡಿಟಿಂಗ್, ಮಗೊಂದು ಕಡೆ ಗ್ರಾಫಿಕ್ಸ್ ಕೆಲಸ.. ಹೀಗಾಗಿ ಎಲ್ಲ ದೃಶ್ಯಗಳ ಶೂಟಿಂಗ್‍ನಲ್ಲಿ ನಾಗಣ್ಣ ಇರೋಕೆ ಸಾಧ್ಯವಾಗಿಲ್ಲ. ಗ್ರಾಫಿಕ್ಸ್ ಜವಾಬ್ದಾರಿಯನ್ನಂತೂ ನಾಗಣ್ಣ ಪೂರ್ತಿಯಾಗಿ ಪ್ರಸಾದ್ ಹೆಗಲಿಗೆ ಹಾಕಿಬಿಟ್ಟಿದ್ದಾರಂತೆ. 

ದರ್ಶನ್ ಪೋರ್ಷನ್‍ಗಳನ್ನು ಮಾತ್ರ ನಾಗಣ್ಣ ಕಣ್ಣಲ್ಲಿ ಕಣ್ಣಿಟ್ಟು ಶೂಟಿಂಗ್ ಮಾಡಿಸಿದ್ದಾರೆ. ಅಭಿಮನ್ಯು ನಿಖಿಲ್ ದೃಶ್ಯಗಳ ಚಿತ್ರೀಕರಣವನ್ನು ನಾಗೇಂದ್ರ ಪ್ರಸಾದ್ ಮಾಡಿಸಿದ್ದಾರೆ. ಹೀಗೆ ಕುರುಕ್ಷೇತ್ರ ಚಿತ್ರದ ಜವಾಬ್ದಾರಿ ಹಂಚಿಕೆಯಾಗಿದೆ.

ಸದ್ಯಕ್ಕೆ ಡಬ್ಬಿಂಗ್ ಮುಕ್ತಾಯ ಹಂತದಲ್ಲಿದೆ. ಡಬ್ಬಿಂಗ್ ಮಾಡಬೇಕಿರುವ ದೊಡ್ಡ ಸ್ಟಾರ್ ಎಂದರೆ ರವಿಚಂದ್ರನ್. ಶ್ರೀಕೃಷ್ಣನ ಪಾತ್ರದ ಡಬ್ಬಿಂಗ್ ಕೆಲಸ ಇನ್ನೂ ಶುರುವಾಗಿಲ್ಲ. ಉಳಿದಂತೆ ದರ್ಶನ್ ಸೇರಿದಂತೆ ಹಲವು ಕಲಾವಿದರು ತಮ್ಮ ಕೆಲಸವನ್ನು ಮುಗಿಸಿಕೊಟ್ಟಿದ್ದಾರೆ. ಬಹುಶಃ ಜೂನ್ ಅಂತ್ಯದ ವೇಳೆಗೆ ಚಿತ್ರ ಸಿದ್ಧವಾಗಬಹುದು.