` ಬಾಡಿಬಿಲ್ಡರ್ ರವಿಯ ಅದ್ಭುತ ಸಾಧನೆಯ ಕಥೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
body building ravi leads team india
AV Ravi

ರವಿ.. ಹಾಗೆಂದರೆ ಯಾರು ಎನ್ನುವವರು ಬಾಡಿ ಬಿಲ್ಡರ್ ರವಿ ಅಂದ್ರೆ.. ಓ ಅವರಾ ಎಂದು ತಿರುಗಿ ನೋಡ್ತಾರೆ. ಕಣ್ಣಲ್ಲೊಂದು ಮೆಚ್ಚುಗೆಯ ಸೆಳಕಿರುತ್ತದೆ. ಅದು ರವಿಯ ಸಾಧನೆ. ಅವರು ಮಿಸ್ಟರ್ ಇಂಡಿಯಾ, ಮಿಸ್ಟರ್ ಕರ್ನಾಟಕ, ದಸರಾ, ಎಕಲವ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಶಸ್ತಿ, ಪದಕ ಗೆದ್ದುಕೊಂಡಿದ್ದಾರೆ.

ವೃತ್ತಿಯಲ್ಲಿ ಆದಾಯ ತೆರಿಗೆ ಇನ್ಸ್‍ಪೆಕ್ಟರ್. ಆ ವೃತ್ತಿ ಸಿಕ್ಕಿದ್ದು ದೇಹದಾಢ್ರ್ಯ ಪ್ರದರ್ಶನದ ಪರಾಕ್ರಮದಿಂದಲೇ. ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿರುವ ರವಿ, ಈ ಬಾರಿಯೂ ಭಾರತೀಯ ದೇಹದಾಢ್ರ್ಯ ತಂಡಕ್ಕೆ ನಾಯಕ. ಅದೂ 4ನೇ ಬಾರಿ. ಜಗತ್ತಿನಲ್ಲೇ ಬಾಡಿಬಿಲ್ಡರ್ಸ್ ತಂಡದ ಅತ್ಯಂತ ಹಿರಿಯ ನಾಯಕ ಎನ್ನುವುದು ರವಿಗೂ ಹೆಮ್ಮೆ. 8 ಬಾರಿ ವಿಶ್ವಚಾಂಪಿಯನ್ ಆಗಿರುವ ರವಿ, ಈ ಬಾರಿ ಫಿಲಿಫೈನ್ಸ್‍ನ ಸಿಬು ಸಿಟಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಜೂನ್ 1ರಿಂದ ಕ್ರೀಡಾಕೂಟ ಶುರುವಾಗಲಿದೆ.

ಕನ್ನಡ, ತೆಲುಗು ಸೇರಿದಂತೆ 130ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರವಿ ಅವರಿಗೆ ಈಗ 53 ವರ್ಷ. ಪ್ರತಿದಿನ ಕನಿಷ್ಟ 5 ಗಂಟೆ ದೇಹದಂಡಿಸುವ ರವಿ, ಸ್ಪರ್ಧೆಗಳಿರುವಾಗ 8 ಗಂಟೆಗಳ ಸುದೀರ್ಘ ಕಾಲ ಅಭ್ಯಾಸ ಮಾಡ್ತಾರೆ. ಆದರೆ, ನೆನಪಿರಲಿ.. ರವಿ ಚಿಕನ್, ಮಟನ್ ತಿನ್ನುತ್ತಾರಾದರೂ, ಉಳಿದವರಂತೆ ದಿನಕ್ಕೆ 20 ಮೊಟ್ಟೆ, 10 ಕೆಜಿ ಚಿಕನ್ ಎನ್ನುವವರಲ್ಲ. ಸಾಮಾನ್ಯರು ಹೇಗೆ ತಿಂತಾರೋ ಅಷ್ಟೇ ಚಿಕನ್, ಮಟನ್ ತಿಂತಾರೆ. ಉಳಿದಂತೆ ರವಿ ನೆಚ್ಚಿಕೊಂಡಿರುವುದು ಸಸ್ಯಾಹಾರವನ್ನೇ. ಕಾಳು, ತರಕಾರಿ, ಸೊಪ್ಪು, ಕ್ಯಾರೆಟ್, ಮೂಲಂಗಿ, ಮುಸುಕಿನ ಜೋಳ, ಕಬ್ಬಿನ ರಸ, ಕಾಳುಗಳು ಇಷ್ಟ. 

ದಿಢೀರ್ ಎಂದು ಬಾಡಿಬಿಲ್ಡರ್ ಆಗಲು ಸಾಧ್ಯವೇ ಇಲ್ಲ ಎನ್ನುವ ರವಿ, ಡ್ರಗ್ಸ್‍ನ್ನು ದಯವಿಟ್ಟು ತೆಗೆದುಕೊಳ್ಳಬೇಡಿ ಎಂದು ಮನವಿಯನ್ನೂ ಮಾಡ್ತಾರೆ. ಅದರಿಂದ ದೇಹಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಅನ್ನೋದು ರವಿ ಅಭಿಪ್ರಾಯ. ಅದು ಸತ್ಯವೂ ಹೌದು.

ಏನಾಗಲೀ.. ಮೊದಲು ರವಿಗೆ ಶುಭಾಶಯ ಹೇಳೋಣ. ಮತ್ತೊಮ್ಮೆ ಭಾರತ ತಂಡ ಪದಕಗಳೊಂದಿಗೆ ವಾಪಸ್ಸಾಗಲೀ ಎಂದು ಹಾರೈಸೋಣ. ಗುಡ್‍ಲಕ್ ರವಿ.

Sagutha Doora Doora Movie Gallery

Popcorn Monkey Tiger Movie Gallery