` ಎಲ್ಲಿದ್ದರೂ ಮನೆಗೆ ಹೋಗು - ಅಭಿಮಾನಿಗೆ ಸುದೀಪ್ ಮನವಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep requests fans to return
Sudeep, Sudeep Fan

ಅಭಿಮಾನಿಗಳ ಎದುರು ಸದಾ ಮಗುವಾಗುವ ಕಿಚ್ಚ ಸುದೀಪ್ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತಮ್ಮ ಅಭಿಮಾನಿ ಮಣಿಕಂಠ ಎಂಬುವವರು ಮನೆಯವರೊಂದಿಗೆ ಮುನಿಸಿಕೊಂಡು ಹೋಗಿದ್ದಾರೆ ಅನ್ನೋ ಸುದ್ದಿ ತಿಳಿದ ಸುದೀಪ್, ಅಭಿಮಾನಿಗೆ ಎಲ್ಲಿದ್ದರೂ ಮನೆಗೆ ಬಾ. ಮನೆಯವರು ಅಂದಮೇಲೆ ಒಂದು ಮಾತು ಬರುತ್ತೆ. ಒಂದ್ ಮಾತು ಹೋಗುತ್ತೆ. ನೀನು ಎಲ್ಲೇ ಇದ್ದರೂ ಮನೆಗೆ ಹೋಗು. ಆಮೇಲೆ ನಾನೇ ಬಿಡುವಾದಾಗ ನಿಮ್ಮ ಮನೆಗೆ ಒಂದ್ಸಲ ಬರ್ತೀನಿ ಎಂದು ಹೇಳಿದ್ದಾರೆ ಸುದೀಪ್.

ಅಭಿಮಾನಿಗಳಿಗೆ ಹಲವು ಬಾರಿ ಇಂತಹ ಬುದ್ದಿವಾದ ಹೇಳಿರುವ ಸುದೀಪ್, ಈ ಬಾರಿ ಕುಟುಂಬವೊಂದನ್ನು ಒಂದುಗೂಡಿಸಲು ಮುಂದಾಗಿದ್ದಾರೆ. 

I Love You Movie Gallery

Rightbanner02_butterfly_inside

One Way Movie Gallery