ಕಳೆದ ಕೆಲವು ತಿಂಗಳಿಂದ ಕನ್ನಡಿಗರ ಮನಗೆದ್ದಿದ್ದ ಸರಗಮಪ ಲಿಟ್ಲ್ ಚಾಂಪ್, ರಿಯಾಲಿಟಿ ಶೋನ ಪುಟ್ಟ ಪ್ರತಿಭೆಗಳಿಂದಲೇ ಮನಸೂರೆಗೊಂಡಿತ್ತು. ಹಂಸಲೇಖ ಮಹಾಗುರುವಾಗಿ, ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ತೀರ್ಪುಗಾರರಾಗಿದ್ದ ಕಾರ್ಯಕ್ರಮಕ್ಕೆ ಚಿನಕುರುಳಿ ಅನುಶ್ರೀ ನಿರೂಪಕಿಯಾಗಿದ್ದರು. ಈಗ ಫೈನಲ್ ಮುಗಿದಿದೆ.
ಬೆಳಗಾವಿಯ ವಿಶ್ವಪ್ರಸಾದ್, ಲಿಟ್ಲ್ ಚಾಂಪ್ ಆಗಿ ಆಯ್ಕೆಯಾಗಿದ್ದಾರೆ. ಜ್ಞಾನೇಶ್ ಮತ್ತು ಕೀರ್ತನಾ ರನ್ನರ್ ಅಪ್ ಆಗಿದ್ಧಾರೆ.
ಫೈನಲ್ ತಲುಪಿದ್ದ ಸ್ಪರ್ಧಿಗಳಲ್ಲಿ ಅಭಿಜಾತ್ ಭಟ್, ತೇಜಸ್ ಶಾಸ್ತ್ರಿ ಕೂಡಾ ಅತ್ಯುತ್ತಮ ಪೈಪೋಟಿ ನೀಡಿದರು. ಈ ಬಾರಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿದ್ದು ವಿಶೇಷ.