ಮೊಟ್ಟೆ.. ಅಂದ್ರೆ, ಕನ್ನಡಿಗರಿಗೆ ಈಗ ನೆನಪಾಗುವ ಹೆಸರುಗಳಲ್ಲಿ ರಾಜ್ ಬಿ ಶೆಟ್ಟಿ ಹೆಸರು ಮುಂಚೂಣಿಯಲ್ಲಿದೆ. ಅಷ್ಟರಮಟ್ಟಿಗೆ ಅವರು ತಮಗೇ ಒಂದು ಇಮೇಜ್ ಕೊಟ್ಟುಕೊಂಡವರು. ಅವರೀಗ ಗಾಂಧಿಯಾಗುತ್ತಿದ್ದಾರೆ.
ಮಣಿಪಾಲ್ ಕಾಲೇಜ್‍ನ ಕೆಲವು ವಿದ್ಯಾರ್ಥಿಗಳು ಒಟ್ಟಿಗೇ ಸೇರಿ ಫಿಕ್ಷನ್ ಅನ್ನೋ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ಶೆಟ್ಟಿ ನಾಸಿರ್ ಅನ್ನೋ ಯುವಕನ ಪಾತ್ರ ಮಾಡುತ್ತಿದ್ದಾರೆ. ಹೆಸರು ನಾಸಿರ್ ಎಂದಿದ್ದರೂ, ಎಲ್ಲರೂ ಅವರನ್ನು ಗಾಂಧಿ ಎಂದೇ ಕರೆಯುತ್ತಿರುತ್ತಾರೆ. ಹೀಯಾಳಿಸುತ್ತಿರುತ್ತಾರೆ. ಏಕೆ ಅನ್ನೋದಕ್ಕೆ ಉತ್ತರ ಸಿಕ್ಕೋದು ಸಿನಿಮಾದಲ್ಲಿ ಮಾತ್ರ.
ಅಂದಹಾಗೆ ಅದು ಡಾರ್ಕ್ ಸಿನಿಮಾ. ಅಂದರೆ ಸಂಕೇತಗಳು ಹೆಚ್ಚಿರುವ ಸಿನಿಮಾ. ಕ್ರೌಡ್ ಫಂಡಿಂಗ್ ಮೂಲಕ ಸಿನಿಮಾ ಸಿದ್ಧವಾಗುತ್ತಿ