` ಪ್ರೇಮಿ, ರೆಬಲ್, ಟ್ರಬಲ್.. ಎಲ್ಲ ಅವರೇ ಅಂತೆ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
what is the story line of amar
Amar Movie Image

ಜ್ಯೂ.ಅಂಬರೀಷ್, ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಚಿತ್ರರಂಗಕ್ಕೆ ಅಮರ್ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದ ಕಥೆ ಏನು..? ಅಭಿಷೇಕ್ ಪಾತ್ರ ಎಂಥದ್ದು..? ಅಂಥಾದ್ದೊಂದು ಕುತೂಹಲ ಸಹಜಾಗಿಯೇ ಅಭಿಮಾನಿಗಳಲ್ಲಿದೆ. 

ಇದೊಂದು ಯೂತ್‍ಫುಲ್ ಲವ್‍ಸ್ಟೋರಿ. ಬ್ಯೂಟಿಫುಲ್ ಲವ್‍ಸ್ಟೋರಿ. ಈ ಚಿತ್ರದಲ್ಲಿ ಪ್ರೇಮಿಯೂ ಅವರೇ, ರೆಬಲ್ಲು, ಟ್ರಬಲ್ಲು ಎಲ್ಲ ಅವರೇ.. ನಾಗಶೇಖರ್ ನಿರ್ದೇಶನದ ಚಿತ್ರವಾದ್ದರಿಂದ ನಿರೀಕ್ಷೆಗಳೂ ಇವೆ. 

ದರ್ಶನ್ ಜೊತೆ ಯಜಮಾನ, ಉಪೇಂದ್ರ ಜೊತೆ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ನಟಿಸುತ್ತಿರುವ ತಾನ್ಯಾ ಹೋಪ್ ಅಭಿಷೇಕ್ ಅಂಬರೀಷ್ ಚಿತ್ರಕ್ಕೆ ನಾಯಕಿ. 

ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರದ ಮೂಲಕ, ಕನ್ನಡಕ್ಕೆ ಮತ್ತೊಬ್ಬ ಆರಡಿ ಎತ್ತರದ ಹೀರೋ ಸಿಗುತ್ತಿದ್ದಾರೆ.