` ಯಂಗ್ ರೆಬಲ್‍ಸ್ಟಾರ್‍ಗೆ ಕಿಚ್ಚನ ಸ್ವಾಗತ ಹೇಗಿತ್ತು ಗೊತ್ತಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kiccha wishes junior rebel star
Amar Movie Image

ಯಂಗ್ ರೆಬಲ್‍ಸ್ಟಾರ್ ಅಭಿಷೇಕ್ ಅಂಬರೀಷ್ ಮೊದಲ ಚಿತ್ರವನ್ನು ಇಡೀ ಚಿತ್ರರಂಗ ಸಂಭ್ರಮದಿಂದ ಎದುರು ನೋಡುತ್ತಿದ್ದರೆ, ಕಿಚ್ಚ ಸುದೀಪ್ ತಮ್ಮದೇ ಸ್ಟೈಲ್‍ನಲ್ಲಿ ಶುಭ ಕೋರಿದ್ದಾರೆ.

ನಿನ್ನದೇ ಆದ ಹೊಸ ಅಧ್ಯಾಯ ಸೃಷ್ಟಿಯಾಗಲಿ..

ನೀನು ಇಡುವ ಪ್ರತಿ ಹೆಜ್ಜೆಯೂ ನಿನ್ನದಾಗಲೀ..

ನೀನು ಮುಟ್ಟಬೇಕಿರುವ ಗುರಿಯನ್ನು ಮುಟ್ಟಿಬಿಡು

ನಿನ್ನದೇ ಆದ ಸಾಮ್ರಾಜ್ಯವನ್ನು ನೀನೇ ಸೃಷ್ಟಿಸು

ನೀನು ಕಟ್ಟಿದ ಆ ಸಾಮ್ರಾಜ್ಯಕ್ಕೆ ನೀನೇ ಚಕ್ರವರ್ತಿಯಾಗು

ಶುಭವಾಗಲಿ ಅಭಿ

ರೈಸ್&ಶೈನ್

ಚಿತ್ರರಂಗದ ಹಾಲಿ ಸ್ಟಾರ್ ನಟನೊಬ್ಬ, ಇದಕ್ಕಿಂತ ಸುಂದರ ಪದಗಳಲ್ಲಿ ಒಬ್ಬ  ಯುವನಟನನ್ನು ಸ್ವಾಗತಿಸಲು ಸಾಧ್ಯವಿಲ್ಲವೇನೋ.. ಕಿಚ್ಚನ ಹಾರೈಕೆಗೆ ಪ್ರತಿಕ್ರಿಯಿಸಿರುವ ಸುಮಲತಾ, ಅಭಿಯ ಕಲಾಜೀವನಕ್ಕೆ ನೀನೇ ಸ್ಫೂರ್ತಿ ಎಂದಿದ್ದಾರೆ.